}

ಮಣಿಪಾಲ: ನಕಲಿ ಕ್ಯೂಆರ್‌ ಕೋಡ್‌ ಬಳಸಿ 12 ಲಕ್ಷ ರೂ. ವಂಚನೆ; ಆರು ಸಿಬ್ಬಂದಿ ಸೆರೆ

Prajwal amin
By -
0

 


ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ ಓಡಾಡುವ ಬ್ಯಾಟರಿ ಚಾಲಿತ ವಾಹನಗಳ ಪ್ರಯಾಣಿಕರಿಂದ ನಕಲಿ ಕ್ಯೂಆರ್ ಕೋಡ್ ಮೂಲಕ ಹಣ ಸಂಗ್ರಹಿಸಿ, ಕಂಪನಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ವಂಚಿಸಿದ ಆರು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.


ಎಂಐಟಿ ಕ್ಯಾಂಪಸ್‌ನೊಳಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಓಡಾಟದ ಅನುಕೂಲಕ್ಕಾಗಿ 'ಇಂಡಿಯಾಂಟಾ ಇ-ಮೊಬಿಲಿಟಿ' (Indeanta E-Mobility) ಎಂಬ ಕಂಪನಿಯು ಬ್ಯಾಟರಿ ಚಾಲಿತ ವಾಹನಗಳ ಸೇವೆಯನ್ನು ಒದಗಿಸುತ್ತಿದೆ. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಕಳೆದ ಏಪ್ರಿಲ್ 1ರಿಂದಲೇ ಈ ಅಕ್ರಮಕ್ಕೆ ಇಳಿದಿದ್ದರು. ಪ್ರಯಾಣಿಕರಿಂದ ಸಂಗ್ರಹಿಸಬೇಕಿದ್ದ ಶುಲ್ಕವನ್ನು ಕಂಪನಿಯ ಅಧಿಕೃತ ಖಾತೆಗೆ ಜಮೆ ಮಾಡುವ ಬದಲು, ತಾವೇ ಸೃಷ್ಟಿಸಿದ ನಕಲಿ ಮರ್ಚೆಂಟ್ ಕ್ಯೂಆರ್‌ ಕೋಡ್‌ ಅನ್ನು ಪ್ರಯಾಣಿಕರಿಗೆ ಸ್ಕ್ಯಾನ್ ಮಾಡಲು ನೀಡುತ್ತಿದ್ದರು.


ಈ ನಕಲಿ ಕ್ಯೂಆರ್ ಕೋಡ್ ಮೂಲಕ ಸಂಗ್ರಹವಾದ ಸುಮಾರು 12 ಲಕ್ಷ ರೂಪಾಯಿ ಹಣವು, ಆರೋಪಿಗಳಲ್ಲೊಬ್ಬನಾದ ಮುತ್ತಣ್ಣ ಅಡಿನವರ್‌ನ ಪತ್ನಿ ಐಶ್ವರ್ಯ ಎಂಬುವವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆಯಾಗುತ್ತಿತ್ತು. ನಂತರ ಆ ಹಣವನ್ನು ಆರೋಪಿಗಳು ತಮ್ಮೊಳಗೆ ಹಂಚಿಕೊಳ್ಳುತ್ತಿದ್ದರು. ಲೆಕ್ಕಪರಿಶೋಧನೆ ವೇಳೆ ಈ ಬಹುದೊಡ್ಡ ವಂಚನೆ ಬೆಳಕಿಗೆ ಬಂದಿದ್ದು, ಕೂಡಲೇ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಮಣಿಪಾಲ ಠಾಣೆಯ ಪಿಎಸ್‌ಐ ಶಂಭುಲಿಂಗಯ್ಯ ಎಂ. ನೇತೃತ್ವದ ತಂಡ, ಅಕ್ಟೋಬರ್ 2ರಂದು ಎಲ್ಲ ಆರು ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಂಧಿತರನ್ನು ಸಿದ್ದಮೂರ್ತಿ ಜಿ. (29), ಶಿವರಾಜ್ ನಾಯ್ಕ (30), ಸುದೀಪ್ (30), ಜಿತೇಶ್ ಕಾಂಚನ್ (29), ಮುತ್ತಣ್ಣ ಅಡಿನವರ್ (32) ಹಾಗೂ ಎಂ.ಬಿ. ಅವಿನಾಶ್ (24) ಎಂದು ಗುರುತಿಸಲಾಗಿದೆ.


ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ (316, 318 ಹಾಗೂ 3(5)) ಪ್ರಕರಣ ದಾಖಲಾಗಿದೆ. ಸದ್ಯ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಂಚನೆಯ ಜಾಲದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default