}

ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಉತ್ಪಾದನೆ ಮತ್ತು ಬಳಕೆಗೆ ಸಂಪೂರ್ಣ ನಿಷೇಧ: ಶೀಘ್ರದಲ್ಲೇ ಸರ್ಕಾರದ ಕಟ್ಟುನಿಟ್ಟಿನ ಆದೇಶ

Prajwal amin
By -
0


ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ಕಳಪೆ ಗುಣಮಟ್ಟದ 'ಹಾಫ್ ಹೆಲ್ಮೆಟ್'ಗಳ (ಅರ್ಧ ಹೆಲ್ಮೆಟ್) ಬಳಕೆ ಹಾಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ. ಕೇವಲ ದಂಡದಿಂದ ಪಾರಾಗಲು ಸವಾರರು ರಸ್ತೆಬದಿಯಲ್ಲಿ ಸಿಗುವ ಅಗ್ಗದ ಹೆಲ್ಮೆಟ್ ಮೊರೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇನ್ನೆರಡು ಮೂರು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ.

ಸಂಚಾರ ಪೊಲೀಸರ ಕಣ್ಣಿಗೆ ಮಣ್ಣೆರಚಲು ಮತ್ತು ದಂಡ ಕಟ್ಟುವುದನ್ನು ತಪ್ಪಿಸಲು ಬಹುತೇಕ ದ್ವಿಚಕ್ರ ವಾಹನ ಸವಾರರು 100 ರಿಂದ 200 ರೂಪಾಯಿ ಕೊಟ್ಟು ಫುಟ್‌ಪಾತ್‌ನಲ್ಲಿ ಸಿಗುವ ಅರ್ಧ ಹೆಲ್ಮೆಟ್ ಧರಿಸುತ್ತಾರೆ. ಇಂತಹ ಹೆಲ್ಮೆಟ್‌ಗಳು ಜೋರಾಗಿ ಗಾಳಿ ಬಂದರೆ ಹಾರಿಹೋಗುತ್ತವೆ ಹಾಗೂ ಅಪಘಾತದ ಸಮಯದಲ್ಲಿ ತಲೆಗೆ ಯಾವುದೇ ರೀತಿಯ ರಕ್ಷಣೆ ಒದಗಿಸುವುದಿಲ್ಲ. ಈ ಹಿಂದೆ ಟ್ರಾಫಿಕ್ ಪೊಲೀಸರು ಇಂತಹ ಕಳಪೆ ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡು ರಸ್ತೆಯಲ್ಲಿ ಹಾಕಿ ಬುಲ್ಡೋಜರ್ ಹರಿಸಿ ನಾಶಪಡಿಸಿದ್ದರು. ಆದರೂ, ಮಾರುಕಟ್ಟೆಯಲ್ಲಿ ಇವುಗಳ ಲಭ್ಯತೆ ಇರುವುದರಿಂದ ಸವಾರರು ಮತ್ತೆ ಅದೇ ಹೆಲ್ಮೆಟ್ ಖರೀದಿಸಿ ಬಳಸುತ್ತಿದ್ದಾರೆ. ಸವಾರರು ತಮ್ಮ ಜೀವದ ರಕ್ಷಣೆಗಿಂತ ದಂಡ ಉಳಿಸುವ ಲೆಕ್ಕಾಚಾರದಲ್ಲಿಯೇ ಇಂತಹ ಟೋಪಿಗಳಂತಹ ಹೆಲ್ಮೆಟ್‌ಗಳನ್ನು ಧರಿಸುತ್ತಿದ್ದಾರೆ 

ಈ ಸಮಸ್ಯೆಯನ್ನು ಮೂಲದಲ್ಲೇ ಚಿವುಟಿ ಹಾಕಲು ನಿರ್ಧರಿಸಿರುವ ಸರ್ಕಾರ, ಈಗ ನೇರವಾಗಿ ಉತ್ಪಾದನಾ ಮೂಲದ ಮೇಲೆಯೇ ಪ್ರಹಾರ ಮಾಡಲು ಸಜ್ಜಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಸಾರಿಗೆ ಸಚಿವ ಬೈರತಿ ಸುರೇಶ್, ರಾಜ್ಯದಲ್ಲಿ ಇನ್ನು ಮುಂದೆ ಹಾಫ್ ಹೆಲ್ಮೆಟ್ ಉತ್ಪಾದನೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಯಮ ಉಲ್ಲಂಘಿಸಿ ಇಂತಹ ಸುರಕ್ಷಿತವಲ್ಲದ ಹೆಲ್ಮೆಟ್‌ಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆದಿದ್ದು, ಹಾಫ್ ಹೆಲ್ಮೆಟ್‌ನಿಂದ ಆಗುವ ಅನಾಹುತಗಳ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಅಂತಿಮ ಒಪ್ಪಿಗೆ ಪಡೆದ ಬಳಿಕ ಅಧಿಕೃತವಾಗಿ ಹೊಸ ನಿಯಮ ಜಾರಿಗೆ ಬರಲಿದೆ. ರಸ್ತೆ ಅಪಘಾತಗಳ ಸಂದರ್ಭದಲ್ಲಿ ಉಂಟಾಗುವ ಸಾವು-ನೋವುಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರದ ಈ ದಿಟ್ಟ ಹೆಜ್ಜೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default