}

ಮಂಗಳೂರು: ಕಬಡ್ಡಿ ಆಟದ ವೇಳೆ ಶುರುವಾದ ಜಗಳ; ಕಾಲೇಜು ವಿದ್ಯಾರ್ಥಿಗೆ ಚೂರಿ ಇರಿತ

Prajwal amin
By -
0



ಮಂಗಳೂರಿನ ಬಳ್ಳಾಲ್‌ಭಾಗ್‌ನಲ್ಲಿರುವ ಕಾಲೇಜೊಂದರ ಬಳಿ ಹಾಡಹಗಲೇ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿದು, ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಬೆಳ್ತಂಗಡಿ ಮೂಲದ, ಬಳ್ಳಾಲ್‌ಭಾಗ್‌ನ ಶ್ರೀದೇವಿ ಕಾಲೇಜಿನ ಅಂತಿಮ ವರ್ಷದ ಬಿ.ಸಿ.ಎ. ವಿದ್ಯಾರ್ಥಿ ಮಹಮ್ಮದ್ ಉನೈಸ್ (20) ಎಂದು ಗುರುತಿಸಲಾಗಿದೆ.

ಘಟನೆಗೆ ಅಂದು ಬೆಳಿಗ್ಗೆ ನಡೆದ ಕಬಡ್ಡಿ ಪಂದ್ಯದ ವೇಳೆ ಶುರುವಾದ ಕ್ಷುಲ್ಲಕ ಜಗಳವೇ ಕಾರಣ ಎನ್ನಲಾಗಿದೆ. ಬೆಳಿಗ್ಗೆ ಕಾಲೇಜು ಸಮೀಪದ 'ಸಿಟಿ ಅರೇನಾ ಟರ್ಫ್‌'ನಲ್ಲಿ ಕಬಡ್ಡಿ ಆಡುತ್ತಿದ್ದಾಗ ಉನೈಸ್‌ನ ಸ್ನೇಹಿತ ರಾಯಿಝ್ ಹಾಗೂ ಅದೇ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ, ಕಾಟಿಪಳ್ಳ ನಿವಾಸಿ ರಿಯಾನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಮತ್ತು ಜಗಳ ಬಿಡಿಸಲು ಮುಂದಾದ ಉನೈಸ್ ಮೇಲೆಯೇ ರಿಯಾನ್ ಕೈಯಿಂದ ಹಲ್ಲೆ ನಡೆಸಿದ್ದ.

ಆದರೆ ಜಗಳ ಅಲ್ಲಿಗೇ ನಿಲ್ಲಲಿಲ್ಲ. ಇದೇ ದ್ವೇಷದ ಹಿನ್ನೆಲೆಯಲ್ಲಿ ಮಧ್ಯಾಹ್ನ ಸುಮಾರು 1.45ರ ಹೊತ್ತಿಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ, ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ರಿಯಾನ್ ಹಾಗೂ ಆತನ ಐವರು ಸಹಚರರು ಏಕಾಏಕಿ ದಾಳಿ ನಡೆಸಿದ್ದಾರೆ. ಉನೈಸ್‌ನನ್ನು ಸುತ್ತುವರಿದ ಗುಂಪು "ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ" ಎಂದು ಬೆದರಿಸಿದ್ದಲ್ಲದೆ, ಆತನ ತಲೆ, ಬೆನ್ನು ಮತ್ತು ಎಡಕಿವಿಗೆ ಚೂರಿಯಿಂದ ಮನಬಂದಂತೆ ಚುಚ್ಚಿ ಪರಾರಿ

ಗಂಭೀರವಾಗಿ ಗಾಯಗೊಂಡಿರುವ ಉನೈಸ್‌ನನ್ನು ತಕ್ಷಣವೇ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಉನೈಸ್ ನೀಡಿರುವ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 88/2026ರ ಅಡಿ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಾಯ್ದೆಗಳ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default