}

ಎಂಆರ್‌ಪಿಎಲ್ ಬ್ಲಾಸ್ಟ್‌ಗೆ ದೈವದ ಮುನಿಸು ಕಾರಣವೇ? ಜುಮಾದಿ ಬಂಟ ದೈವ ಕೊಟ್ಟಿದ್ದ ಎಚ್ಚರಿಕೆ ಏನು?

Prajwal amin
By -
0


 ಮಂಗಳೂರಿನ ಎಂಆರ್‌ಪಿಎಲ್ (MRPL) ಘಟಕದಲ್ಲಿ ನಿನ್ನೆ ಸಂಭವಿಸಿದ ಭಾರೀ ಸ್ಫೋಟದ ಹಿಂದೆ 'ದೈವಾಕ್ರೋಶ'ದ ಕಾರಣವಿದೆಯೇ ಎಂಬ ಚರ್ಚೆಗಳು ಈಗ ಸ್ಥಳೀಯವಾಗಿ ತೀವ್ರಗೊಂಡಿವೆ. ನೆಲ್ಲಿದಡಿ ಗುತ್ತಿನ ಜುಮಾದಿ ಬಂಟ ದೈವಸ್ಥಾನಕ್ಕೆ ಸಂಬಂಧಿಸಿದಂತೆ ಎಂಆರ್‌ಪಿಎಲ್ ಆಡಳಿತ ಮಂಡಳಿ ಹಾಗೂ ದೈವ ಭಕ್ತರ ನಡುವೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷವೇ ಈ ಅವಘಡಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಎಂಆರ್‌ಪಿಎಲ್ ಹಾಗೂ ಸೆಜ್ (SEZ) ವ್ಯಾಪ್ತಿಯಲ್ಲಿ ಇರುವ ಹಳೆಯ ದೈವಸ್ಥಾನದ ಸುತ್ತಮುತ್ತ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದರೂ, ದೈವಸ್ಥಾನವನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಬಂದ ಕೆಲವು ಅಧಿಕಾರಿಗಳು ಸ್ಥಳೀಯ ತುಳುನಾಡಿನ ಆಚರಣೆಗಳ ಬಗ್ಗೆ ಅರಿವಿಲ್ಲದೆ, ದೈವಸ್ಥಾನಕ್ಕೆ ಹೋಗುವ ದಾರಿಗೆ ತಂತಿ ಬೇಲಿ ಹಾಗೂ ಕಾಂಪೌಂಡ್ ನಿರ್ಮಿಸಿ ಭಕ್ತರ ಪ್ರವೇಶಕ್ಕೆ ತೀವ್ರ ನಿರ್ಬಂಧ ಹೇರಿದ್ದರು. ವಾರ್ಷಿಕ ನೇಮೋತ್ಸವ, ಸೇರಿದಂತೆ ದೈವದ ಆಚರಣೆಗಳಿಗೆ ಮುಕ್ತವಾಗಿ ತೆರಳಲು ಅವಕಾಶ ನೀಡದೆ, ಪೊಲೀಸರನ್ನು ಬಳಸಿ ಲಾಠಿಚಾರ್ಜ್ ಮೂಲಕ ದೌರ್ಜನ್ಯ ಎಸಗಲಾಗಿದೆ ಎಂಬುದು ಸ್ಥಳೀಯರ ಗಂಭೀರ ಆರೋಪ.

ಸುಮಾರು ನಾಲ್ಕು ತಿಂಗಳ ಹಿಂದೆ ದೈವದರ್ಶನದ ವೇಳೆ, ಕಾಂತೇರಿ ಜುಮಾದಿ ದೈವವು ಎಂಆರ್‌ಪಿಎಲ್ ಆಡಳಿತಕ್ಕೆ ನೇರ ಎಚ್ಚರಿಕೆ ನೀಡಿತ್ತು. "ಯಾರು ನನ್ನನ್ನು ಇಲ್ಲಿಂದ ಕಳುಹಿಸಲು ನೋಡುತ್ತಾರೋ ಅವರನ್ನು ನಾನು ಬಿಡುವುದಿಲ್ಲ. ನನ್ನ ಚಾವಡಿಯನ್ನು ಕೆಡವಲು ಬಂದರೆ, ಜಾಗವನ್ನು ವಶಪಡಿಸಿಕೊಳ್ಳಲು ಯತ್ನಿಸಿದರೆ ಇಲ್ಲಿಂದ ಅಲ್ಲಿಯವರೆಗೆ ಬೆಂಕಿ ಹತ್ತಿಸುತ್ತೇನೆ. ನನ್ನ ಮಣ್ಣನ್ನು ಉಳಿಸಿಕೊಳ್ಳಲು ನನಗೆ ಗೊತ್ತಿದೆ" ಎಂದು ದೈವ ನುಡಿದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ದೈವದ ನರ್ತಕರು ಹಾಗೂ ಭಕ್ತರು ಈ ಬಗ್ಗೆ ಎಂಆರ್‌ಪಿಎಲ್ ಅಧಿಕಾರಿಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ದಿಢೀರನೆ ಘಟಕದಲ್ಲಿ ಸ್ಫೋಟ ಸಂಭವಿಸಿರುವುದು ದೈವದ ಕೋಪದ ಮುನ್ಸೂಚನೆ ಎಂದೇ ಭಕ್ತರು ನಂಬಿದ್ದಾರೆ.

ದೈವಸ್ಥಾನದ ಮುಂಭಾಗದಲ್ಲೇ ಬೃಹತ್ ಪೈಪ್‌ಲೈನ್‌ಗಳು ಹಾದುಹೋಗಿದ್ದು, ಭಕ್ತರಿಗೆ ಪೂಜೆ ಸಲ್ಲಿಸಲು ಪ್ರತ್ಯೇಕ ಹಾಗೂ ಮುಕ್ತ ದಾರಿ ಕಲ್ಪಿಸಿಕೊಡಬೇಕು ಎಂಬುದು ದೈವಸ್ಥಾನದ ಆಡಳಿತ ಮಂಡಳಿಯ ಬೇಡಿಕೆಯಾಗಿದೆ. ಸುಮಾರು ಒಂದೂವರೆ ವರ್ಷದ ಹಿಂದೆಯೇ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿ, ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದವು. ಆದರೂ, ಇದು ಸರ್ಕಾರಿ ಜಾಗ ಎಂಬ ವಾದ ಮುಂದಿಟ್ಟುಕೊಂಡು ಕಂಪನಿ ಬಿಟ್ಟುಕೊಡಲು ಸಿದ್ಧವಿರಲಿಲ್ಲ. ನಿನ್ನೆಯ ಅನಾಹುತದ ಬಳಿಕವಾದರೂ ಎಂಆರ್‌ಪಿಎಲ್ ಅಧಿಕಾರಿಗಳು ಎಚ್ಚೆತ್ತುಕೊಂಡು, ಸ್ಥಳೀಯರ ನಂಬಿಕೆಗಳಿಗೆ ಬೆಲೆಕೊಟ್ಟು ದೈವದ ಆಚರಣೆಗಳಿಗೆ ಸುಗಮ ದಾರಿ ಮಾಡಿಕೊಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default