}

ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾದ ಕದ್ರಿ: ಯಕ್ಷಗಾನದಲ್ಲಿ ಶ್ರೀದೇವಿಯಾಗಿ ಆರ್ಷಿಯಾ ಖಾನ್ ಕಮಾಲ್

Prajwal amin
By -
0

 


ಮಂಗಳೂರು: ಕಲೆಯೆಂದರೆ ಅದಕ್ಕೊಂದು ಗಡಿ ಇಲ್ಲ, ಧರ್ಮದ ಹಂಗಿಲ್ಲ ಎನ್ನುವುದಕ್ಕೆ ಕರಾವಳಿಯ ಗಂಡುಕಲೆ ಯಕ್ಷಗಾನ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. ಯಕ್ಷಗಾನ ರಂಗಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಆರ್ಷಿಯಾ ಖಾನ್, ಇದೀಗ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ‘ಶ್ರೀದೇವಿ’ಯಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಬರುವ ಅಕ್ಟೋಬರ್ 20ರಂದು ನಡೆಯಲಿರುವ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಅವರು ಈ ಬಹುಮುಖ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ.


ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಾಡ ಮೂಲದವರಾದ ಆರ್ಷಿಯಾ ಅವರಿಗೆ ಯಕ್ಷಗಾನ ಹೊಸದೇನಲ್ಲ. ಕಳೆದ ಹನ್ನೆರಡು ವರ್ಷಗಳಿಂದ ಬಣ್ಣ ಹಚ್ಚುತ್ತಿರುವ ಅವರು, ಗುರು ಕದ್ರಿ ರಮೇಶ್ ಭಟ್ ಅವರ ಗರಡಿಯಲ್ಲಿ ಪಳಗಿದವರು. ಈ ಹಿಂದೆ ಇದೇ ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಮಹಿಷಾಸುರನಂತಹ ಅಬ್ಬರದ ಪಾತ್ರಗಳಿಗೂ ಜೀವ ತುಂಬಿ ಸೈ ಎನಿಸಿಕೊಂಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಅವರು ಜಗನ್ಮಾತೆಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಸಾತ್ವಿಕ ಪಾತ್ರಕ್ಕಾಗಿ ಅವರು ಕಟ್ಟುನಿಟ್ಟಿನ ವ್ರತಾಚರಣೆಗಳನ್ನು ಪಾಲಿಸುತ್ತಿದ್ದು, ಸಾತ್ವಿಕ ಆಹಾರ ಪದ್ಧತಿಯ ಮೊರೆಹೋಗಿದ್ದಾರೆ. ದೇವಿಯ ವೇಷಭೂಷಣ, ಹಾವಭಾವ ಹಾಗೂ ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟಿಗೆ ಚ್ಯುತಿ ಬರದಂತೆ ಅಭಿನಯಿಸಲು ಅವರು ವಿಶೇಷ ಸಿದ್ಧತೆ ನಡೆಸುತ್ತಿದ್ದಾರೆ.


ನವರಾತ್ರಿ ಹಬ್ಬದ ಪ್ರಯುಕ್ತ ಕದಳಿ ಕಲಾ ಕೇಂದ್ರದ ವತಿಯಿಂದ ಕದ್ರಿ ರಾಜಾಂಗಣದಲ್ಲಿ 14ನೇ ವರ್ಷದ ‘ಕದಳಿ ದಶಾಹ’ ಕಾರ್ಯಕ್ರಮ ಆಯೋಜನೆಗೊಂಡಿದೆ. ಅಕ್ಟೋಬರ್ 11ರಿಂದ 20ರವರೆಗೆ ನಡೆಯುವ ಈ ಹತ್ತು ದಿನಗಳ ಯಕ್ಷಗಾನ ಸರಣಿಯ ಸಮಾರೋಪದ ದಿನವಾದ 20ರಂದು ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರದರ್ಶನಗೊಳ್ಳಲಿದೆ. ಕಟೀಲು, ಪಾವಂಜೆ ಸೇರಿದಂತೆ ಕರಾವಳಿಯ ಪ್ರಸಿದ್ಧ ಮೇಳಗಳ ಘಟಾನುಘಟಿ ಕಲಾವಿದರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು, ಇವರೊಂದಿಗೆ ಆರ್ಷಿಯಾ ಖಾನ್ ಶ್ರೀದೇವಿಯಾಗಿ ರಂಗಸ್ಥಳವೇರಲಿದ್ದಾರೆ.


ಒಂದು ಕಾಲದಲ್ಲಿ ಮಹಿಳೆಯರಿಗೆ ಯಕ್ಷಗಾನ ರಂಗದಲ್ಲಿ ಅವಕಾಶಗಳೇ ವಿರಳವಾಗಿದ್ದವು. ಅಂತಹದ್ರಲ್ಲಿ ಅನ್ಯ ಕೋಮಿನ ಮಹಿಳೆಯೊಬ್ಬರು ಸತತ 12 ವರ್ಷಗಳಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡು, ಇದೀಗ ಹಿಂದೂ ದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕರಾವಳಿಯ ಸೌಹಾರ್ದ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ. ಜಾತಿ, ಧರ್ಮಗಳ ಗೋಡೆಗಳನ್ನು ಮೀರಿ ಕಲೆಯನ್ನು ಆರಾಧಿಸುವ ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಲಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default