}

44 ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ! ಆಟೋ ಚಾಲಕನಿಗೆ ₹23,500 ದಂಡ, ಆಟೋ ಜಪ್ತಿ

suddilive.com
By -
0

ಕಲಬುರಗಿಯಲ್ಲಿ 44 ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಆಟೋ ಚಾಲಕನಿಗೆ ₹23,500 ದಂಡ

 ಕಲಬುರಗಿ ನಗರದಲ್ಲಿ ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದ ಆಟೋ ಚಾಲಕನ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿರುವ ಘಟನೆ ನಡೆದಿದೆ. ಸಂಚಾರ ನಿಯಮಗಳನ್ನು ನಿರ್ಲಕ್ಷ್ಯ ಮಾಡಿದ ಆಟೋ ಚಾಲಕನಿಗೆ ಬರೋಬ್ಬರಿ 23,500 ರೂ. ದಂಡ ವಿಧಿಸಿರುವ ಪೊಲೀಸರು, ಆಟೋವನ್ನು ಕೂಡ ಜಪ್ತಿ ಮಾಡಿಕೊಂಡಿದ್ದಾರೆ.


ಶಹಬಾದ್ ಪಟ್ಟಣದ ನಿವಾಸಿಯಾಗಿರುವ ಈ ಆಟೋ ಚಾಲಕ, ಹಲವು ದಿನಗಳಿಂದ ನಗರದಲ್ಲಿ ನಿರ್ಲಕ್ಷ್ಯವಾಗಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಸಿಗ್ನಲ್ ಜಂಪ್ ಮಾಡುವುದು, ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದು, ವಾಹನ ಚಲಾಯಿಸುತ್ತಲೇ ಮೊಬೈಲ್ ಬಳಕೆ ಮಾಡುವುದು ಸೇರಿದಂತೆ ಒಟ್ಟು 44 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಪೊಲೀಸರ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.


ಈ ಹಿನ್ನೆಲೆಯಲ್ಲಿ ಕಲಬುರಗಿ ಸಂಚಾರಿ ಠಾಣೆ-2 ಪೊಲೀಸರು ವಾಹನದ ದಾಖಲೆಗಳನ್ನು ಪರಿಶೀಲನೆ ನಡೆಸಿ ಒಟ್ಟು 23,500 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದ ಹಿನ್ನೆಲೆ ಆಟೋವನ್ನು ಜಪ್ತಿ ಮಾಡಿರುವ ಪೊಲೀಸರು, ಮುಂದಿನ ದಿನಗಳಲ್ಲಿ ಇಂತಹ ನಿಯಮ ಉಲ್ಲಂಘನೆ ಮಾಡದಂತೆ ಚಾಲಕನಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.


ನಗರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ತೋರುವ ವಾಹನ ಸವಾರರ ವಿರುದ್ಧ ಪೊಲೀಸರು ಈಗ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸಂಚಾರ ನಿಯಮ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದೇ ವೇಳೆ, ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿ ರೀಲ್ಸ್ ಮಾಡಿದ್ದ ಯುವಕರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಕೆಲವರು ಜೀವದ ಹಂಗು ತೊರೆದು ವಾಹನ ಚಲಾಯಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇವುಗಳ ವಿರುದ್ಧ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ.


ದೊಡ್ಡಬಳ್ಳಾಪುರಕ್ಕೆ ಬಂದಿದ್ದ ರೀಲ್ಸ್ ರಾಣಿಯರಾದ ಗಂಗಾರಂಗ ಹಾಗೂ ಸವಿತಾರನ್ನು ಸ್ಥಳೀಯ ಯುವಕ ಮಂಜ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ, ಮೂವರು ಒಂದೇ ಬೈಕ್‌ನಲ್ಲಿ ಪ್ರಯಾಣಿಸಿದ್ದರು. ಅಲ್ಲದೆ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ಈ ವೇಳೆ “ಹುಲಿ ಹುಲಿ ದೊಡ್ಡಬಳ್ಳಾಪುರದ ಹುಲಿ” ಎಂಬ ಹಾಡಿಗೆ ರೀಲ್ಸ್ ಮಾಡುತ್ತಾ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.


ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಮಂಜನನ್ನು ಬೈಕ್ ಸಮೇತ ಠಾಣೆಗೆ ಕರೆಸಿಕೊಂಡು ಕಾನೂನು ಪಾಠ ಮಾಡಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಒಂದು ಸಾವಿರ ರೂಪಾಯಿ ದಂಡ ವಿಧಿಸಿ, ಮುಂದಿನ ದಿನಗಳಲ್ಲಿ ಈ ರೀತಿಯ ಸಾಹಸಗಳಿಗೆ ಮುಂದಾಗದಂತೆ ಎಚ್ಚರಿಕೆ ನೀಡಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಅಪಾಯಕಾರಿಯಾಗಿದ್ದು, ಇದು ಜೀವಹಾನಿಗೂ ಕಾರಣವಾಗಬಹುದು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


ಕಲಬುರಗಿ ಟ್ರಾಫಿಕ್ ಸುದ್ದಿ, ಆಟೋ ಚಾಲಕ ದಂಡ, ಸಂಚಾರ ನಿಯಮ ಉಲ್ಲಂಘನೆ, ಟ್ರಾಫಿಕ್ ಫೈನ್, ಆಟೋ ಜಪ್ತಿ, ಕಲಬುರಗಿ ಪೊಲೀಸರು, ಟ್ರಾಫಿಕ್ ರೂಲ್ಸ್, ರೀಲ್ಸ್ ರಾಜ ದಂಡ

ಕಲಬುರಗಿ ಟ್ರಾಫಿಕ್ ಪೊಲೀಸರು

ಆಟೋ ಚಾಲಕನಿಗೆ ದಂಡ

23,500 ರೂ ದಂಡ

ಸಂಚಾರ ನಿಯಮ ಉಲ್ಲಂಘನೆ

ಆಟೋ ಜಪ್ತಿ ಸುದ್ದಿ

ಸಿಗ್ನಲ್ ಜಂಪ್ ಪ್ರಕರಣ

ಮೊಬೈಲ್ ಬಳಕೆ ದಂಡ

ಟ್ರಾಫಿಕ್ ಫೈನ್ ಕರ್ನಾಟಕ

ದೊಡ್ಡಬಳ್ಳಾಪುರ ರೀಲ್ಸ್ ರಾಜ

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್

ತ್ರಿಬಲ್ ರೈಡ್ ದಂಡ

ಕರ್ನಾಟಕ ಟ್ರಾಫಿಕ್ ನ್ಯೂಸ್

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default