}

ಉಡುಪಿಯಲ್ಲಿ 97,706 ಪ್ರಕರಣಗಳ ಪರಿಶೀಲನೆ, EROಗಳಿಂದ ನೋಟಿಸ್‌ ಸಾಧ್ಯತೆ

suddilive.com
By -
0



ಉಡುಪಿ: ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಜಿಲ್ಲೆಯಲ್ಲಿ ಒಟ್ಟು 97,706 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಹಿಂದಿನ ಮತದಾರರ ಪಟ್ಟಿಯೊಂದಿಗೆ ವಿವರಗಳು ಲಿಂಕ್ ಆಗದ 31,903 ಪ್ರಕರಣಗಳು ಹಾಗೂ ಲಿಂಕೇಜ್‌ ಪೂರ್ಣಗೊಂಡ ಬಳಿಕದ ಪರಿಶೀಲನೆಯಲ್ಲಿ ತಾರ್ಕಿಕ ವ್ಯತ್ಯಾಸ (Logical Discrepancy) ಅಥವಾ ಇತರ ಅಸಂಗತತೆ (Anomalies) ಕಂಡುಬಂದ 65,803 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಿಂದಿನ ಮತದಾರರ ಪಟ್ಟಿಯೊಂದಿಗೆ ವಿವರಗಳು ಲಿಂಕ್ ಆಗದಿರುವುದು ಅಥವಾ ಲಿಂಕೇಜ್‌ ಬಳಿಕದ ಪರಿಶೀಲನೆಯಲ್ಲಿ ವ್ಯತ್ಯಾಸಗಳು ಕಂಡುಬಂದಿರುವ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸಲಾಗುವುದು ಎಂದರು.

ಸಂಬಂಧಪಟ್ಟ ಚುನಾವಣಾ ನೋಂದಣಾಧಿಕಾರಿ (ERO) ಅಗತ್ಯವಿರುವ ಪ್ರಕರಣಗಳಲ್ಲಿ ಮತದಾರರಿಗೆ ನೋಟಿಸ್‌ ಜಾರಿಗೊಳಿಸಲಿದ್ದಾರೆ. ಕೆಲವು ಸಂದರ್ಭಗಳಲ್ಲಿ ERO ಸ್ವಯಂಪ್ರೇರಿತವಾಗಿ (ಸುಮೋಟೊ) ನೋಟಿಸ್‌ ನೀಡಲೂ ಅವಕಾಶವಿದೆ. ನೋಟಿಸ್‌ ಪಡೆದ ಮತದಾರರಿಗೆ ತಮ್ಮ ಹಕ್ಕನ್ನು ಪ್ರತಿಪಾದಿಸಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ 118-ಬೈಂದೂರು ಕ್ಷೇತ್ರದಲ್ಲಿ 3,891 ಲಿಂಕೇಜ್‌ ಆಗದ ಪ್ರಕರಣಗಳು ಹಾಗೂ 11,275 ಲಾಜಿಕಲ್‌ ಡಿಸ್ಕ್ರೆಪೆನ್ಸಿ/ಅನಾಮಲಿಸ್‌ ಪ್ರಕರಣಗಳು ಸೇರಿ ಒಟ್ಟು 15,166 ಪ್ರಕರಣಗಳು ಪತ್ತೆಯಾಗಿವೆ.

119-ಕುಂದಾಪುರ ಕ್ಷೇತ್ರದಲ್ಲಿ 4,233 ಲಿಂಕೇಜ್‌ ಆಗದ ಪ್ರಕರಣಗಳು ಮತ್ತು 6,945 ಲಾಜಿಕಲ್‌ ಡಿಸ್ಕ್ರೆಪೆನ್ಸಿ/ಅನಾಮಲಿಸ್‌ ಪ್ರಕರಣಗಳು ಸೇರಿ ಒಟ್ಟು 11,178 ಪ್ರಕರಣಗಳಿವೆ. 120-ಉಡುಪಿ ಕ್ಷೇತ್ರದಲ್ಲಿ ಕ್ರಮವಾಗಿ 13,255 ಮತ್ತು 23,499 ಪ್ರಕರಣಗಳು ಸೇರಿ ಒಟ್ಟು 36,754 ಪ್ರಕರಣಗಳು ದಾಖಲಾಗಿವೆ.

121-ಕಾಪು ಕ್ಷೇತ್ರದಲ್ಲಿ 5,971 ಲಿಂಕೇಜ್‌ ಆಗದ ಪ್ರಕರಣಗಳು ಹಾಗೂ 14,850 ಲಾಜಿಕಲ್‌ ಡಿಸ್ಕ್ರೆಪೆನ್ಸಿ/ಅನಾಮಲಿಸ್‌ ಪ್ರಕರಣಗಳು ಸೇರಿ ಒಟ್ಟು 20,821 ಪ್ರಕರಣಗಳಿವೆ. 122-ಕಾರ್ಕಳ ಕ್ಷೇತ್ರದಲ್ಲಿ 4,553 ಮತ್ತು 9,234 ಪ್ರಕರಣಗಳು ಸೇರಿ ಒಟ್ಟು 13,787 ಪ್ರಕರಣಗಳು ಪತ್ತೆಯಾಗಿವೆ.

ಮತದಾರರಿಗೆ ಅನಗತ್ಯ ತೊಂದರೆಯಾಗದಂತೆ ಪ್ರಕರಣಗಳ ವಿಚಾರಣೆ ನಡೆಸಲು ಹೆಚ್ಚುವರಿ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು (AERO) ಹಾಗೂ ಹೆಚ್ಚುವರಿ AEROಗಳನ್ನು ನೇಮಿಸಲಾಗಿದೆ. ನೋಟಿಸ್‌ಗೆ ಸಂಬಂಧಿಸಿದ ವಿಚಾರಣೆಯನ್ನು ಮತದಾರರ ಅನುಕೂಲಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ನಗರ ಪ್ರದೇಶದ ವಾರ್ಡ್‌ ವ್ಯಾಪ್ತಿಯಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default