}

ಆಗಸ್ಟ್ 26ರ ರಜೆ ಆಗಸ್ಟ್ 25ಕ್ಕೆ ಬದಲಿಸಿ: ಉಡುಪಿ ಸುನ್ನೀ ಕೋ-ಓರ್ಡಿನೇಷನ್ ಸಮಿತಿ ಮನವಿ

suddilive.com
By -
0


ಉಡುಪಿ: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ಅವರ ಪವಿತ್ರ ಮೀಲಾದುನ್ನಬಿ ಪ್ರಯುಕ್ತ ರಾಜ್ಯ ಸರ್ಕಾರ ಆಗಸ್ಟ್ 26ರಂದು ಸಾರ್ವತ್ರಿಕ ರಜೆ ಘೋಷಿಸಿದೆ. ಆದರೆ, ಚಂದ್ರದರ್ಶನದಲ್ಲಿ ಉಂಟಾದ ವ್ಯತ್ಯಾಸದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಖಾಝಿಗಳು ಆಗಸ್ಟ್ 25ರಂದು ಮೀಲಾದುನ್ನಬಿ ಆಚರಿಸಲು ನಿರ್ಧರಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ನಿಗದಿಪಡಿಸಿರುವ ಸಾರ್ವತ್ರಿಕ ರಜೆಯನ್ನು ಆಗಸ್ಟ್ 25ಕ್ಕೆ ಬದಲಾಯಿಸಿ ನೀಡುವಂತೆ ಸುನ್ನೀ ಕೋ-ಓರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಸ್ವರೂಪ ಅವರಿಗೆ ಮನವಿ ಸಲ್ಲಿಸಲಾಯಿತು.


ಇದೇ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಅವರಿಗೂ ಇ-ಮೇಲ್ ಮೂಲಕ ಮನವಿ ಸಲ್ಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.


ಸುನ್ನೀ ಕೋ-ಓರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಅವರ ನೇತೃತ್ವದಲ್ಲಿ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿತು. ನಿಯೋಗದಲ್ಲಿ ಅಡ್ವೊಕೇಟ್ ಹಬೀಬ್ ಅಲಿ ಅಂಬಾಗಿಲು, ಸುಭಾನ್ ಅಹ್ಮದ್ ಹೊನ್ನಾಳ, ವಸೀಮ್ ಬಾಷಾ ಕುಂದಾಪುರ, ಶೇಖ್ ನಹೀಮ್ ಕಟಪಾಡಿ ಹಾಗೂ ಅಶ್ರಫ್ ತೋನ್ಸೆ ಉಪಸ್ಥಿತರಿದ್ದರು.


About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default