}

ದಕ್ಷಿಣ ಕನ್ನಡ, ಉಡುಪಿ ಜಿ.ಪಂ ಹಾಗೂ ತಾ.ಪಂ ಚುನಾವಣೆಯ ಕರಡು ಮೀಸಲಾತಿ ಪಟ್ಟಿ ಪ್ರಕಟ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Prajwal amin
By -
0

 


ರಾಜ್ಯದಲ್ಲಿ ಬರೋಬ್ಬರಿ ಒಂದು ದಶಕದ ಬಳಿಕ ನಡೆಯಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಭರದ ಸಿದ್ಧತೆ ಆರಂಭಗೊಂಡಿದೆ. ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಗಳನ್ವಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ 31 ಜಿಲ್ಲಾ ಪಂಚಾಯಿತಿ ಹಾಗೂ 239 ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಸುದೀರ್ಘ ಅವಧಿಯ ನಂತರ ಚುನಾವಣೆ ನಡೆಯುತ್ತಿರುವುದರಿಂದ ಈ ಬಾರಿ ಕ್ಷೇತ್ರಗಳ ಮೀಸಲಾತಿಯಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ.


ಪ್ರಕಟಗೊಂಡಿರುವ ಈ ಕರಡು ಮೀಸಲಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸಾರ್ವಜನಿಕರಿಗೆ ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ಅಂದರೆ, ಅಕ್ಟೋಬರ್ 19ನೇ ತಾರೀಖಿನ ಸೋಮವಾರ ಸಂಜೆ 5.00 ಗಂಟೆಯೊಳಗೆ ಆಕ್ಷೇಪಣೆಗಳನ್ನು ತಲುಪಿಸಬೇಕಿದೆ. ಆಕ್ಷೇಪಣಾ ಅರ್ಜಿಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು–560001 ಕಚೇರಿಗೆ ಸಲ್ಲಿಸಬಹುದಾಗಿದೆ.


ಸರ್ಕಾರ ಪ್ರಕಟಿಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕ್ಷೇತ್ರವಾರು ಮೀಸಲಾತಿಯ ಸಮಗ್ರ ವಿವರಗಳು ಈ ಕೆಳಗಿನಂತಿವೆ.


ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ ಹಳೆಯಂಗಡಿ, ಪುತ್ತಿಗೆ, ಸಂಗಬೆಟ್ಟು ಕ್ಷೇತ್ರಗಳು ಹಿಂದುಳಿದ ವರ್ಗ 'ಅ'ಗೆ ಮೀಸಲಾಗಿವೆ. 62ನೇ ತೋಕೂರು, ತೆಂಕ ಎಡಪದವು, ಮುನ್ನೂರು, ಬೆಳುವಾಯಿ, ಲಾಯಿಲ, ಮಾಣಿ, ಕೊಯಿಲಾ, ಬೆಳ್ಳಾರೆ ಕ್ಷೇತ್ರಗಳು ಸಾಮಾನ್ಯ (ಮಹಿಳೆ) ವರ್ಗಕ್ಕೆ ಹಾಗೂ ಮೂಡುಶೆಡ್ಡೆ, ಮಂಜನಾಡಿ, ಕುವೆಟ್ಟು, ಸುಬ್ರಹ್ಮಣ್ಯ ಕ್ಷೇತ್ರಗಳು ಹಿಂದುಳಿದ ವರ್ಗ 'ಅ' (ಮಹಿಳೆ)ಗೆ ಕಾಯ್ದಿರಿಸಲ್ಪಟ್ಟಿವೆ. ಅಡ್ಯಾರ್, ಕೊಣಾಜೆ, ಗೋಳ್ತಮಜಲು, ಪುದು, ನಾರಾವಿ, ಉಜಿರೆ, ಉಪ್ಪಿನಂಗಡಿ, ಕುಟ್ರುಪಾಡಿ, ಜಾಲ್ಸೂರ್ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಸೇರಿವೆ. ಸರಪಾಡಿ ಪರಿಶಿಷ್ಟ ಜಾತಿ, ಸಜಿಪಮುನ್ನೂರು ಹಿಂದುಳಿದ ವರ್ಗ 'ಎ' (ಮಹಿಳೆ), ಕೊಳ್ನಾಡು ಹಿಂದುಳಿದ ವರ್ಗ 'ಬಿ', ಪುಣಚ ಪರಿಶಿಷ್ಟ ಪಂಗಡ (ಮಹಿಳೆ), ಅಳದಂಗಡಿ ಪರಿಶಿಷ್ಟ ಪಂಗಡ, ಧರ್ಮಸ್ಥಳ ಪರಿಶಿಷ್ಟ ಜಾತಿ (ಮಹಿಳೆ), ಕಣಿಯೂರು ಹಿಂದುಳಿದ ವರ್ಗ 'ಬ' (ಮಹಿಳೆ), ಆರ್ಯಾಪು ಹಾಗೂ ಗುತ್ತಿಗಾರು ಹಿಂದುಳಿದ ವರ್ಗ 'ಎ', ನರಿಮೊಗ್ರು ಪರಿಶಿಷ್ಟ ಜಾತಿ (ಮಹಿಳೆ) ಮತ್ತು ನೆಟ್ಟಣಿಗೆ ಮುಡ್ನೂರು ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ.


ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕುತ್ತೆತ್ತೂರು ಕ್ಷೇತ್ರವು ಪರಿಶಿಷ್ಟ ಜಾತಿ (ಮಹಿಳೆ), ತೆಂಕ ಎಕ್ಕಾರು, ಕೊಲಂಬೆ ಸಾಮಾನ್ಯ (ಮಹಿಳೆ), ಬಡಗ ಎಡಪದವು, ಮೂಡುಪೆರಾರ್, ಮೂಡುಶೆಡ್ಡೆ, ಉಳಾಯಿಬೆಟ್ಟು, ಬೊಂಡಂತಿಲ ಸಾಮಾನ್ಯ ಕ್ಷೇತ್ರಗಳಾಗಿವೆ. ತೆಂಕ ಎಡಪದವು ಪರಿಶಿಷ್ಟ ಪಂಗಡ (ಮಹಿಳೆ), ಕಿಲೆಂಜಾರು, 62 ತೋಕೂರು ಹಿಂದುಳಿದ ವರ್ಗ 'ಎ', ಬಡಗ ಎಕ್ಕಾರು ಹಿಂದುಳಿದ ವರ್ಗ 'ಎ' (ಮಹಿಳೆ), ಮುಳೂರು ಹಿಂದುಳಿದ ವರ್ಗ 'ಅ' (ಮಹಿಳೆ) ಹಾಗೂ ಅಡ್ಯಾರ್ ಕ್ಷೇತ್ರವು ಹಿಂದುಳಿದ ವರ್ಗ 'ಬಿ' (ಮಹಿಳೆ) ಮೀಸಲಾತಿ ಪಡೆದಿದೆ.


ಉಳ್ಳಾಲ ತಾಲೂಕಿನ ಮುನ್ನೂರು, ನರಿಂಗಾನ ಹಿಂದುಳಿದ ವರ್ಗ 'ಅ' (ಮಹಿಳೆ) ವರ್ಗಕ್ಕೆ, ಬೆಳ್ಮ, ಪಜೀರು ಸಾಮಾನ್ಯ (ಮಹಿಳೆ) ವರ್ಗಕ್ಕೆ ಹಾಗೂ ಪಾವೂರು, ಇರಾ, ಮಂಜನಾಡಿ, ತಲಪಾಡಿ ಸಾಮಾನ್ಯ ಕ್ಷೇತ್ರಗಳಾಗಿವೆ. ಹರೇಕಳ ಹಿಂದುಳಿದ ವರ್ಗ 'ಎ' (ಮಹಿಳೆ), ಕೊಣಾಜೆ ಪರಿಶಿಷ್ಟ ಪಂಗಡ (ಮಹಿಳೆ), ಸಜಿಪನಡು ಹಿಂದುಳಿದ ವರ್ಗ 'ಬ' ಮತ್ತು ಕೈರಂಗಳ ಪರಿಶಿಷ್ಟ ಜಾತಿ (ಮಹಿಳೆ) ಕ್ಷೇತ್ರಗಳಾಗಿವೆ. ಬಂಟ್ವಾಳ ತಾಲೂಕಿನಲ್ಲಿ ಪಂಜಿಕಲ್ಲು, ಕಾವಳಮುಡೂರು, ಸಜಿಪಮುನ್ನೂರು, ಸಜಿಪಮೂಡ, ಗೋಲ್ತಮಜಲು, ಮಾಣಿ, ವೀರಕಂಬ ಸಾಮಾನ್ಯ ಕ್ಷೇತ್ರಗಳಾದರೆ, ನಾವೂರ್, ನರಿಕೊಂಬು, ವಿಟ್ಲಪಡ್ನೂರು, ಕೆದಿಲ, ಮಂಚಿ, ವಿಟ್ಲಮುಡ್ನೂರು, ತುಂಬೆ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಸಂಗಬೆಟ್ಟು ಹಿಂದುಳಿದ ವರ್ಗ 'ಎ' (ಮಹಿಳೆ), ಪಿಲಾತಬೆಟ್ಟು ಪರಿಶಿಷ್ಟ ಜಾತಿ (ಮಹಿಳೆ), ಮಣಿನಾಲ್ಕೂರು, ಬಾಳ್ತಿಲ ಹಿಂದುಳಿದ ವರ್ಗ 'ಅ', ಅಮ್ಮುಂಜೆ, ಪುದು ಹಿಂದುಳಿದ ವರ್ಗ 'ಅ' (ಮಹಿಳೆ), ಅಮ್ಟಾಡಿ ಹಿಂದುಳಿದ ವರ್ಗ 'ಬಿ' (ಮಹಿಳೆ), ಕೊಲ್ನಾಡು ಹಿಂದುಳಿದ ವರ್ಗ 'ಬ', ಕನ್ಯಾನ ಹಿಂದುಳಿದ ವರ್ಗ 'ಎ', ಪುಣಚ ಪರಿಶಿಷ್ಟ ಪಂಗಡ (ಮಹಿಳೆ) ಹಾಗೂ ಅಳಿಕೆ ಪರಿಶಿಷ್ಟ ಪಂಗಡಕ್ಕೆ ಸೇರಿದೆ.


ಬೆಳ್ತಂಗಡಿ ತಾಲೂಕಿನಲ್ಲಿ ನಾರಾವಿ, ವೇಣೂರು, ಹೊಸಂಗಡಿ, ಅಂಡಿಂಜೆ, ಅಳದಂಗಡಿ, ಶಿರ್ಲಾಲು, ಮಲಾಡಿ ಸಾಮಾನ್ಯ ಕ್ಷೇತ್ರಗಳಾದರೆ, ಪಡಂಗಡಿ, ಮಿತ್ತಬಾಗಿಲು, ಕಳಂಜ, ಇಳಂತಿಲ, ತಣ್ಣೀರುಪಂತ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಲಾಯಿಲ, ನಡ, ಮುಂಡಾಜೆ ಹಿಂದುಳಿದ ವರ್ಗ 'ಅ'ಗೆ, ಉಜಿರೆ ಪರಿಶಿಷ್ಟ ಪಂಗಡ (ಮಹಿಳೆ), ನೆರಿಯ ಹಿಂದುಳಿದ ವರ್ಗ 'ಎ' (ಮಹಿಳೆ), ಧರ್ಮಸ್ಥಳ ಪರಿಶಿಷ್ಟ ಜಾತಿ, ಕೊಕ್ಕಡ ಪರಿಶಿಷ್ಟ ಜಾತಿ (ಮಹಿಳೆ), ಬಾರ್ಯ, ಕೊಯ್ಯೂರು ಹಿಂದುಳಿದ ವರ್ಗ 'ಅ' (ಮಹಿಳೆ) ಹಾಗೂ ಕುವೆಟ್ಟು ಹಿಂದುಳಿದ ವರ್ಗ 'ಬ' (ಮಹಿಳೆ) ವರ್ಗಕ್ಕೆ ಸೇರಿವೆ.


ಪುತ್ತೂರು ತಾಲೂಕಿನ ಬಲ್ನಾಡು, ಒಳಮೊಗ್ರು, ಮಾಡ್ನೂರು, ಪಡುವನ್ನೂರು ಸಾಮಾನ್ಯ ಕ್ಷೇತ್ರಗಳಾಗಿದ್ದು, 34 ನೆಕ್ಕಿಲಾಡಿ, ಆರ್ಯಾಪು, ನೆಟ್ಟಣಿಗೆ ಮುನ್ನೂರು ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಕಬಕ, ಬಜತ್ತೂರು ಹಿಂದುಳಿದ ವರ್ಗ 'ಎ' (ಮಹಿಳೆ), ಉಪ್ಪಿನಂಗಡಿ ಹಿಂದುಳಿದ ವರ್ಗ 'ಬಿ', ನರಿಮೊಗ್ರು ಹಿಂದುಳಿದ ವರ್ಗ 'ಎ', ಸರ್ವೆ ಪರಿಶಿಷ್ಟ ಜಾತಿ, ಬೆಟ್ಟಂಪಾಡಿ ಪರಿಶಿಷ್ಟ ಪಂಗಡ (ಮಹಿಳೆ) ಹಾಗೂ ಕೊಳ್ತಿಗೆ ಪರಿಶಿಷ್ಟ ಜಾತಿ (ಮಹಿಳೆ) ಕ್ಷೇತ್ರಗಳಾಗಿವೆ. ಕಡಬ ತಾಲೂಕಿನಲ್ಲಿ ಅಲಂಕಾರು, ಕೌಕ್ರಾಡಿ, ಬಳ್ಪ, ಪೆರಾಬೆ ಸಾಮಾನ್ಯ, ನೂಜಿಬಾಳ್ತಿಲ, ಚಾರ್ವಾಕ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಕೊಯಿಲ ಹಿಂದುಳಿದ ವರ್ಗ 'ಎ', ನೆಲ್ಯಾಡಿ ಹಿಂದುಳಿದ ವರ್ಗ 'ಎ' (ಮಹಿಳೆ), ಐತೂರು ಹಿಂದುಳಿದ ವರ್ಗ 'ಬ' (ಮಹಿಳೆ), ಸುಬ್ರಹ್ಮಣ್ಯ ಪರಿಶಿಷ್ಟ ಪಂಗಡ (ಮಹಿಳೆ), ಸವಣೂರು ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಕುಟ್ರುಪಾಡಿ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿವೆ.


ಸುಳ್ಯ ತಾಲೂಕಿನಲ್ಲಿ ಐವರ್ನಾಡು, ಮಡಪ್ಪಾಡಿ, ಪಂಜ ಸಾಮಾನ್ಯ ಹಾಗೂ ಬಾಳಿಲ, ಜಾಲ್ಸೂರು, ನೆಲ್ಲೂರು ಕೆಮ್ರಾಜೆ ಸಾಮಾನ್ಯ (ಮಹಿಳೆ) ವರ್ಗಕ್ಕೆ ಸೇರಿವೆ. ಬೆಳ್ಳಾರೆ ಪರಿಶಿಷ್ಟ ಜಾತಿ, ಅಜ್ಜಾವರ ಪರಿಶಿಷ್ಟ ಜಾತಿ (ಮಹಿಳೆ), ಅಲೆಟ್ಟಿ ಪರಿಶಿಷ್ಟ ಪಂಗಡ (ಮಹಿಳೆ), ಅರಂತೋಡು ಹಿಂದುಳಿದ ವರ್ಗ 'ಎ' (ಮಹಿಳೆ) ಮತ್ತು ಗುತ್ತಿಗಾರು ಹಿಂದುಳಿದ ವರ್ಗ 'ಎ' ಕ್ಷೇತ್ರಗಳಾಗಿವೆ. ಮೂಲ್ಕಿ ತಾಲೂಕಿನಲ್ಲಿ ಅತಿಕಾರಿಬೆಟ್ಟು, ಕಿಲ್ಪಾಡಿ, ಕೆಮ್ರಾಲ್ ಸಾಮಾನ್ಯ, ಐಕಳ ಸಾಮಾನ್ಯ (ಮಹಿಳೆ), ಬಳ್ಕುಂಜೆ ಪರಿಶಿಷ್ಟ ಪಂಗಡ (ಮಹಿಳೆ), 10ನೇ ತೋಕೂರು ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಹಳೆಯಂಗಡಿ ಹಿಂದುಳಿದ ವರ್ಗ 'ಅ' (ಮಹಿಳೆ) ಕ್ಷೇತ್ರಗಳಾಗಿವೆ. ಮೂಡುಬಿದಿರೆ ತಾಲೂಕಿನಲ್ಲಿ ಕಡಂದಲೆ, ಪಡುಮಾರ್ನಾಡು, ಕಲ್ಲಮುಂಡ್ಕೂರ್ ಸಾಮಾನ್ಯ ಹಾಗೂ ಪುತ್ತಿಗೆ, ತೆಂಕಮಿಜಾರು ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಬೆಳುವಾಯಿ ಪರಿಶಿಷ್ಟ ಪಂಗಡ (ಮಹಿಳೆ), ನೆಲ್ಲಿಕಾರು ಹಿಂದುಳಿದ ವರ್ಗ 'ಎ', ತೋಡಾರು ಹಿಂದುಳಿದ ವರ್ಗ 'ಎ' (ಮಹಿಳೆ) ಹಾಗೂ ವಾಲ್ಪಾಡಿ ಪರಿಶಿಷ್ಟ ಜಾತಿ (ಮಹಿಳೆ) ಕ್ಷೇತ್ರಗಳಾಗಿವೆ.


ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಶಿರೂರು-1, ಉಪ್ಪುಂದ, ಕಿರಿಮಂಜೇಶ್ವರ, ನಾಡ ಸಾಮಾನ್ಯ, ಕಂಬದಕೋಣೆ, ನಾವುಂದ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಶಿರೂರು-2 ಹಿಂದುಳಿದ ವರ್ಗ 'ಅ', ಬಿಜೂರು ಪರಿಶಿಷ್ಟ ಜಾತಿ (ಮಹಿಳೆ), ಕೊಲ್ಲೂರು ಪರಿಶಿಷ್ಟ ಪಂಗಡ (ಮಹಿಳೆ), ಕಾಲ್ತೋಡು ಹಿಂದುಳಿದ ವರ್ಗ 'ಬಿ' (ಮಹಿಳೆ) ಹಾಗೂ ಹೇರೂರು ಹಿಂದುಳಿದ ವರ್ಗ 'ಎ' (ಮಹಿಳೆ) ವರ್ಗಕ್ಕೆ ಸೇರಿವೆ. ಕುಂದಾಪುರ ತಾಲೂಕಿನಲ್ಲಿ ತ್ರಾಸಿ, ಹೆಮ್ಮಾಡಿ, ಬೀಜಾಡಿ, ಹಾರ್ದಳ್ಳಿ ಮಂಡಳ್ಳಿ, ಅಮಾಸೆಬೈಲು, ಬೇಳೂರು ಸಾಮಾನ್ಯ ಕ್ಷೇತ್ರಗಳಾದರೆ, ಹೊಸಾಡು, ಸಿದ್ದಾಪುರ, ಕೋಟೇಶ್ವರ, ಮೊಳಹಳ್ಳಿ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ವಂಡ್ಸೆ, ಶಂಕರನಾರಾಯಣ, ಗಂಗೊಳ್ಳಿ ಹಿಂದುಳಿದ ವರ್ಗ 'ಅ', ಕೆರಾಡಿ, ಕಾವ್ರಾಡಿ ಹಿಂದುಳಿದ ವರ್ಗ 'ಅ' (ಮಹಿಳೆ), ಅಜ್ರಿ ಪರಿಶಿಷ್ಟ ಪಂಗಡ (ಮಹಿಳೆ), ತಲ್ಲೂರು ಪರಿಶಿಷ್ಟ ಜಾತಿ (ಮಹಿಳೆ), ಹಂಗಳೂರು ಹಿಂದುಳಿದ ವರ್ಗ 'ಬಿ' (ಮಹಿಳೆ), ಬಸ್ರೂರ್ ಹಿಂದುಳಿದ ವರ್ಗ 'ಎ' ಹಾಗೂ ಕುಂಭಾಶಿ ಹಿಂದುಳಿದ ವರ್ಗ 'ಎ' (ಮಹಿಳೆ)ಗೆ ಮೀಸಲಾಗಿವೆ.


ಬ್ರಹ್ಮಾವರ ತಾಲೂಕಿನಲ್ಲಿ ಕೆಂಜೂರು, ಚಾಂತರು, ಬಾರ್ಕೂರು, ಹಂದಾಡಿ, ವಾರಂಬಳ್ಳಿ, ಹಾರಾಡಿ ಸಾಮಾನ್ಯ, ಮಣೂರು, ಕೋಟ, ಹಿಲಿಯಾಣ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಐರೋಡಿ ಹಿಂದುಳಿದ ವರ್ಗ 'ಅ' (ಮಹಿಳೆ), ಶಿರಿಯಾರ ಹಿಂದುಳಿದ ವರ್ಗ 'ಬ' (ಮಹಿಳೆ), ಕಾಡೂರು ಹಿಂದುಳಿದ ವರ್ಗ 'ಅ', ನಲ್ಕೂರು ಹಿಂದುಳಿದ ವರ್ಗ 'ಎ' (ಮಹಿಳೆ), ಕೊಕ್ಕರ್ಣೆ ಹಿಂದುಳಿದ ವರ್ಗ 'ಎ', ಚೆರ್ಕಾಡಿ ಪರಿಶಿಷ್ಟ ಪಂಗಡ (ಮಹಿಳೆ) ಹಾಗೂ ಉಪ್ಪೂರು ಪರಿಶಿಷ್ಟ ಜಾತಿ (ಮಹಿಳೆ) ಕ್ಷೇತ್ರಗಳಾಗಿವೆ. ಉಡುಪಿ ತಾಲೂಕಿನಲ್ಲಿ 80 ಬಡಗಬೆಟ್ಟು, ಅಲೆವೂರು, ಕಡೇಕಾರು, ನಿಡಂಬೂರು ಸಾಮಾನ್ಯ, ಬೈರಂಪಲ್ಲಿ, ಅಂಜಾರು, ತೋನ್ಸೆ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಪೆರ್ಡೂರು ಪರಿಶಿಷ್ಟ ಪಂಗಡ (ಮಹಿಳೆ), ಬೊಮ್ಮರಬೆಟ್ಟು, ಕಲ್ಯಾಣಪುರ ಹಿಂದುಳಿದ ವರ್ಗ 'ಎ' (ಮಹಿಳೆ), ಮಣಿಪುರ ಹಿಂದುಳಿದ ವರ್ಗ 'ಬಿ', ಉದ್ಯಾವರ ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ತೆಂಕನಿಡಿಯೂರು ಹಿಂದುಳಿದ ವರ್ಗ 'ಎ'ಗೆ ಸೇರಿದೆ.


ಕಾಪು ತಾಲೂಕಿನಲ್ಲಿ ಬೆಳ್ಳೆ, ಕಟಪಾಡಿ, ಎಲ್ಲೂರು, ಮುದರಂಗಡಿ ಸಾಮಾನ್ಯ, ಶಂಕರಪುರ, ಹೆಜಮಾಡಿ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಶಿರ್ವ ಪರಿಶಿಷ್ಟ ಪಂಗಡ (ಮಹಿಳೆ), ಕೋಟೆ, ಉಚ್ಚಿಲ ಹಿಂದುಳಿದ ವರ್ಗ 'ಎ' (ಮಹಿಳೆ), 108 ಕಳತ್ತೂರು ಹಿಂದುಳಿದ ವರ್ಗ 'ಎ', ಪಡುಬಿದ್ರಿ ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಫಲಿಮಾರು ಹಿಂದುಳಿದ ವರ್ಗ 'ಬಿ' ಕ್ಷೇತ್ರಗಳಾಗಿವೆ. ಹೆಬ್ರಿ ತಾಲೂಕಿನಲ್ಲಿ ಹೆಬ್ರಿ, ಶಿವಪುರ, ಶೇಡಿಮನೆ ಸಾಮಾನ್ಯ, ಬೆಳ್ವೆ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾದರೆ, ಮುದ್ರಾಡಿ ಹಿಂದುಳಿದ ವರ್ಗ 'ಎ' (ಮಹಿಳೆ), ವರಂಗ ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಚಾರಾ ಪರಿಶಿಷ್ಟ ಪಂಗಡ (ಮಹಿಳೆ) ಕ್ಷೇತ್ರಗಳಾಗಿವೆ. ಕಾರ್ಕಳ ತಾಲೂಕಿನಲ್ಲಿ ಕೌಡೂರು, ಕೆರ್ವಾಶೆ, ಮುಡಾರು, ನಿಟ್ಟೆ, ಮುಂಡ್ಕೂರು ಸಾಮಾನ್ಯ ಹಾಗೂ ಹಿರ್ಗಾನ, ಕುಕ್ಕುಂದೂರು, ಬೋಳಾ ಸಾಮಾನ್ಯ (ಮಹಿಳೆ) ಕ್ಷೇತ್ರಗಳಾಗಿವೆ. ಕಡ್ತಲ, ಕಲ್ಯಾ ಹಿಂದುಳಿದ ವರ್ಗ 'ಎ', ಮಾರ್ಣೆ ಪರಿಶಿಷ್ಟ ಪಂಗಡ (ಮಹಿಳೆ), ಮಾಳಾ ಪರಿಶಿಷ್ಟ ಜಾತಿ (ಮಹಿಳೆ), ಬೆಳ್ಮಣ್‌, ನಲ್ಲೂರು ಹಿಂದುಳಿದ ವರ್ಗ 'ಎ' (ಮಹಿಳೆ), ಸಾಣೂರು ಹಿಂದುಳಿದ ವರ್ಗ 'ಬಿ' (ಮಹಿಳೆ) ಹಾಗೂ ಮಿಯ್ಯಾರು ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿವೆ.

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default