ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ಆಶ್ರಯದಲ್ಲಿ ಆ.29ರಿಂದ ಸೆ.6ರವರೆಗೆ ಜನ್ಮಾಷ್ಟಮಿ ಸಂಭ್ರಮ ನಡೆಯಲಿದೆ. ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದ್ದು, ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಸಂಕಲ್ಪದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆ.29ರಿಂದ ಸೆ.6ರವರೆಗೆ ಪ್ರತಿದಿನ ಸಂಜೆ 5ರಿಂದ 7ರವರೆಗೆ ಧರ್ಮಸಭೆ ನಡೆಯಲಿದೆ. ರಾತ್ರಿ 7ರಿಂದ 9.30ರವರೆಗೆ ರಾಜಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸೆ.4ರಂದು ರಾತ್ರಿ 12.15ರ ಚಂದ್ರೋದಯ ಕಾಲದಲ್ಲಿ ಪರ್ಯಾಯ ಶ್ರೀ ಶೀರೂರು ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಮರುದಿನ ಸೆ.5ರಂದು ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ವಿವಿಧ ವೇಷಗಳೊಂದಿಗೆ ವಿಟ್ಲಪಿಂಡಿ ಉತ್ಸವ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯ
ರಾಜಾಂಗಣದಲ್ಲಿ ಪ್ರತಿದಿನ ರಾತ್ರಿ 7ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ.28 ಮತ್ತು 29ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ‘ಗುಡಿ ನಮನ’ ಎಂಬ ನಿರಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಆ.28ರಂದು ಕರ್ನಾಟಕ ಸಂಗೀತ, ಆ.29ರಂದು ಕರ್ನಾಟಕ ಸಂಗೀತ ಹಾಗೂ ತ್ರಿವಳಿ ಗಾಯನ, ಆ.30ರಂದು ಸಂಸ್ಕೃತ ತಾಳಮದ್ದಳೆ, ಆ.31ರಂದು ವಯೊಲಿನ್ ವಾದನ, ಸೆ.1ರಂದು ಭರತನಾಟ್ಯ, ಸೆ.2ರಂದು ಕೊಳಲು ವಾದನ, ಸೆ.3ರಂದು ಹಿಂದೂಸ್ತಾನಿ ಸಂಗೀತ, ಸೆ.4ರಂದು ನಾಮಸಂಕೀರ್ತನೆ ಹಾಗೂ ಸೆ.6ರಂದು ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ.
ವಿಟ್ಲಪಿಂಡಿಯಲ್ಲಿ ಮಲ್ಲಯುದ್ಧ ಪ್ರದರ್ಶನ
ಈ ಬಾರಿಯ ಜನ್ಮಾಷ್ಟಮಿ ಆಚರಣೆಯಲ್ಲಿ ಸೆ.5ರಂದು ನಡೆಯಲಿರುವ ವಿಟ್ಲಪಿಂಡಿ ಉತ್ಸವಕ್ಕೆ ಮಲ್ಲಯುದ್ಧ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ.
ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ ಅವರ ಪರಿಕಲ್ಪನೆಯಂತೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ರಾಜ್ಯಮಟ್ಟದ ಕುಸ್ತಿ (ಜೆಟ್ಟಿ) ಕಾಳಗದಲ್ಲಿ ವಿಜೇತರಾದ 8ರಿಂದ 10 ಮಂದಿ ನುರಿತ ಕುಸ್ತಿ ಪಟುಗಳು ಮಲ್ಲಯುದ್ಧ ಪ್ರದರ್ಶನ ನೀಡಲಿದ್ದಾರೆ.
ವಿಟ್ಲಪಿಂಡಿ ಉತ್ಸವದ ಮೆರವಣಿಗೆ ಆರಂಭವಾಗುವ ಸುಮಾರು ಅರ್ಧ ಗಂಟೆ ಮೊದಲು ಶೀರೂರು ಮಠದ ಮುಂಭಾಗದಲ್ಲಿ ನಿರ್ಮಿಸಲಾಗುವ ಅಖಾಡದಲ್ಲಿ ಮಲ್ಲಯುದ್ಧ ನಡೆಯಲಿದೆ. ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಪ್ರದರ್ಶನ ನಡೆಯುವ ನಿರೀಕ್ಷೆಯಿದೆ ಎಂದು ಮಲ್ಲಯುದ್ಧದ ವ್ಯವಸ್ಥೆಗಳ ನಿರ್ವಾಹಕ ವಿಷ್ಣುಪ್ರಸಾದ್ ಪಾಡಿಗಾರು ತಿಳಿಸಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

