}

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ ಮದ್ರಸಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಕರ್ಷಕ ಸ್ನೇಹ ಜಾಥಾ

suddilive.com
By -
0

 ಮಾಣಿ : ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ,)ರವರ 1501 ನೇ ಜನ್ಮ ದಿನ ಸಂಭ್ರಮದ ಅಂಗವಾಗಿ ಮೀಲಾದುನ್ನಬಿ ಕಾರ್ಯಕ್ರಮ ಆಚರಿಸಲಾಯಿತು.


ನಾಲ್ಕು ದಿನಗಳ ಮದ್ರಸಾ ಮಕ್ಕಳ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ,ದಫ್,ಬುರ್ದಾಕವ್ವಾಲಿ,ಪ್ರವಾದಿ ಗುಣಗಾನದ ಹಾಡುಗಳು,ಮತ ಪ್ರಸಂಗ ಮುಂತಾದ ಕಾರ್ಯಕ್ರಮಗಳು,ವಿವಿಧ ಸ್ಪರ್ಧೆಗಳು, ಮೌಲೂದ್ ಪಾರಾಯಣ ಅನ್ನದಾನ ,ಮತ್ತು ಮೀಲಾದುನ್ನಬಿ ಸ್ನೇಹ ಜಾಥಾ ಸೂರಿಕುಮೇರು, ಮಾಣಿ,ದಾಸಕೋಡಿ,ಕಾಯರಡ್ಕ ಮಾರ್ಗವಾಗಿ ಮಸೀದಿಯಲ್ಲಿ ಸಮಾಪ್ತಿಗೊಂಡಿತು.


ಮಾಣಿ ಜಂಕ್ಷನ್ ಬಳಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ,ಮುಂತಾದವರು ಶುಭಕೋರಿ ಮಾತನಾಡಿದರು ಮತ್ತು ಸಿಹಿತಿಂಡಿ ಹಂಚಿ ಸಂಭ್ರಮಿಸಿದರು,ಮಾಣಿ ಭಾಗದಲ್ಲಿ ಸೌಹಾರ್ದತೆಯನ್ನು ಹೆಚ್ಚೆಚ್ಚು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬಾಲಕೃಷ್ಣ ಆಳ್ವರವರು ಮಾತನಾಡಿ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಉಂಟಾಗುತ್ತಿರುವ ಗೊಂದಲಗಳಿಗೆ ಯಾರೂ ಬಲಿಪಶು ಆಗಬಾರದು,ಹಬ್ಬಗಳು ಈದ್ ಮಿಲಾದ್ ಗಳಂತಹಾ ಕಾರ್ಯಕ್ರಮಗಳು ಸ್ನೇಹ ವಿಶ್ವಾಸ ಸೌಹಾರ್ದತೆ ನಂಬಿಕೆ ಹೆಚ್ಚಿಸಿ ಸಮಾಜದಲ್ಲಿ ಒಂದು ಉತ್ತಮ ಸ್ನೇಹ ಬಾಂಧವ್ಯ ನೆಲೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಹಾರೈಸಿದರು.


ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಎಸ್ ಎ ಇಸ್ಮಾಯಿಲ್ ಸೂರಿಕುಮೇರು, ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್,ಕೋಶಾಧಿಕಾರಿ ಹಾಜಿ ಅಬ್ದುಲ್‌ ಹಮೀದ್ ನೆಲ್ಲಿ,,ಮಸೀದಿ ಖತೀಬ್ ಕಲಂದರ್ ಶಾಫಿ ಮದನಿ,ಅನ್ನುಜೂಮಿ,ಸವಣೂರು, ಸದರ್ ಉಸ್ತಾದ್ ಮುಶ್ತಾಕ್ ಹಸನ್ ಫೈಝಿ ಅಲ್ ಮ‌ಅ‌್‌ಬರಿ,,ಮುಅಲ್ಲಿಂ ಉಸ್ತಾದ್ ಆಶಿಕ್ ಹಿಶಾಮಿ ,ಸಹಿತ ಊರಿನ ಪ್ರಮುಖ ಗಣ್ಯರು ಉಲಮಾಗಳು,ಸಾಮಾಜಿಕ ಕಾರ್ಯಕರ್ತರು,ಜಮಾಅತಿಗರು ಭಾಗವಹಿಸಿದರು, ಕಾರ್ಯಕ್ರಮದಲ್ಲಿ ಗಲ್ಫ್ ನಲ್ಲಿ ಕಾರ್ಯಾಚರಿಸುವ ಸೂರಿಕುಮೇರಿನ GSF ಸಂಘಟನೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಕಲಿಯಲು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಮೆರಿಟ್ ಅವಾರ್ಡ್ ಮತ್ತು ಗೌರವ ಧನ ನೀಡಿ ಪ್ರೋತ್ಸಾಹಿಸಿದರು,ರೆಡ್ ಗೈಸ್ ಸೂರಿಕುಮೇರು, ಬದ್ರಿಯಾ ವೆಲ್‌ಫೇರ್ ಅಸೋಸಿಯೇಷನ್, ಬದ್ರಿಯಾ ಫ್ರೆಂಡ್ಸ್, ಮಿಫ್ತಾ‌ಉಲ್ ಉಲೂಮ್ ಮದ್ರಸಾ,ಅಲ್ ಅಮೀನ್ ವೆಲ್‌ಫೇರ್ ಅಸೋಸಿಯೇಷನ್ ಮಾಣಿ,ಮದ್ರಸಾ ಕಮಿಟಿ ಸೂರಿಕುಮೇರು, ಅಲ್ ಮದ್ರಸತುಲ್ ಇರ್ಶಾದಿಯಾ ದಾರುಲ್ ಇರ್ಶಾದ್ ಮಾಣಿ,ಮುಂತಾದ ಸಂಘ ಸಂಸ್ಥೆಗಳು ವಿವಿಧ ಕಾರ್ಯಗಳಲ್ಲಿ ,ಸ್ನೇಹ ಜಾಥಾ ದಲ್ಲಿ ಕೈ ಜೋಡಿಸಿತು,ಮದ್ರಸಾ ಅಧ್ಯಾಪಕರುಗಳು ಮತ್ತು ಶಾಹಿದ್ ಸಂಕ ಹಾಗೂ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.


About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default