}

ಕಟೀಲಿನಲ್ಲಿ ‘ಆತ್ಮ–ಪರಮಾತ್ಮ’ ಜೀವನದ ಸತ್ಯ ದರ್ಶನ ಒಳಚಿಂತನ ಶಿಬಿರ

suddilive.com
By -
0



ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ಅಸಣ್ಣ ಸಭಾಭವನದಲ್ಲಿ ಆಗಸ್ಟ್ 23ರಂದು ಬೆಳಗ್ಗೆ 9.30ಕ್ಕೆ ಆತ್ಮಜ್ಞಾನಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ‘ಆತ್ಮ–ಪರಮಾತ್ಮ’ ಜೀವನದ ಸತ್ಯ ದರ್ಶನ ಕುರಿತ ಒಳಚಿಂತನ ಶಿಬಿರ ನಡೆಯಲಿದೆ.


ಅಧ್ಯಾತ್ಮ ಜಾಗೃತಿ ಎಂದರೆ ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗಿರುವುದಲ್ಲ. ಮನುಷ್ಯನ ನೈಜ ಸ್ವರೂಪ, ಅಂತರಾತ್ಮ ಹಾಗೂ ತನ್ನೊಳಗಿನ ದೈವಿಕತೆಯನ್ನು ಅರಿತುಕೊಳ್ಳುವ ಪ್ರಯತ್ನವೇ ಆಧ್ಯಾತ್ಮಿಕ ಜಾಗೃತಿಯ ಪ್ರಮುಖ ಉದ್ದೇಶವಾಗಿದೆ. ಭೌತಿಕ ಬದುಕಿನ ಗೊಂದಲ ಮತ್ತು ಭ್ರಮೆಗಳನ್ನು ಮೀರಿ ಆತ್ಮಸಾಕ್ಷಾತ್ಕಾರದತ್ತ ಸಾಗಲು ಇದು ಮಾರ್ಗದರ್ಶನ ನೀಡುತ್ತದೆ.


‘ನಾನು ಯಾರು?’ ಎಂಬ ಮೂಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೂ ಅಧ್ಯಾತ್ಮದ ಭಾಗವಾಗಿದೆ. ಮನುಷ್ಯ ಕೇವಲ ದೇಹವಲ್ಲ, ತನ್ನೊಳಗೆ ಇರುವ ಆತ್ಮದ ಅಸ್ತಿತ್ವವನ್ನು ಅರಿತುಕೊಳ್ಳಬೇಕು ಎಂಬ ವಿಚಾರವನ್ನು ಶಿಬಿರದಲ್ಲಿ ಚಿಂತನೆಗೆ ಒಳಪಡಿಸಲಾಗುತ್ತದೆ. ಆಲೋಚನೆಗಳು, ಭಾವನೆಗಳು ಮತ್ತು ಲೌಕಿಕ ವಿಚಾರಗಳಾಚೆಗೆ ಇರುವ ಜಾಗೃತಿಯನ್ನು ಬೆಳೆಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.


ದೈನಂದಿನ ಬದುಕಿನಲ್ಲಿ ಎದುರಾಗುವ ಒತ್ತಡ, ಆತಂಕ ಹಾಗೂ ಮಾನಸಿಕ ಗೊಂದಲಗಳನ್ನು ಎದುರಿಸಿ ನೆಮ್ಮದಿ ಮತ್ತು ಶಾಂತಿಯುತ ಜೀವನ ನಡೆಸಲು ಆಧ್ಯಾತ್ಮಿಕ ಅರಿವು ನೆರವಾಗಬಹುದು. ಸ್ಥಿತಪ್ರಜ್ಞತೆಯತ್ತ ಸಾಗುವುದು, ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದು ಹಾಗೂ ನಮ್ಮೊಳಗಿನ ದೈವಿಕತೆಯನ್ನು ಅರಿತುಕೊಳ್ಳುವುದು ಇದರ ಪ್ರಮುಖ ಉದ್ದೇಶಗಳಾಗಿವೆ.


ಅಧ್ಯಾತ್ಮ ಯಾವುದೇ ಜಾತಿ, ಮತ ಅಥವಾ ವರ್ಗಕ್ಕೆ ಸೀಮಿತವಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಾಧನೆ, ಸೇವೆ ಮತ್ತು ಪ್ರೀತಿಯ ಮೂಲಕ ಆಧ್ಯಾತ್ಮಿಕ ಜಾಗೃತಿಯತ್ತ ಸಾಗಬಹುದು ಎಂಬ ಸಂದೇಶವನ್ನು ಶಿಬಿರ ನೀಡಲಿದೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default