}

ಜೂನ್ 19ಕ್ಕೆ ‘ಬಾಸ್’ ರಿಲೀಸ್ ಅನುಮಾನ? ಸೆಷನ್ಸ್ ಕೋರ್ಟ್ ಬಳಿಕ ಈಗ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್!

suddilive.com
By -
0
actor darshan and vijayalakshmi file petition in high court against boss movie release

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ತೀವ್ರ ಕುತೂಹಲ ಮೂಡಿಸಿರುವ ವಿ. ಲವ ನಿರ್ದೇಶನದ ಮತ್ತು ತನಿಷ್ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬಾಸ್’ ಸಿನಿಮಾ ಬಿಡುಗಡೆಯ ಹಾದಿಗೆ ಈಗ ಹೈಕೋರ್ಟ್ ಆತಂಕ ಎದುರಾಗಿದೆ. ಚಿತ್ರದ ಟೀಸರ್ ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತಲೇ ಇವೆ. ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿ ಸಿದ್ಧಗೊಂಡಿದೆ ಎಂದು ಟೀಸರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಇದು ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಇತ್ತೀಚಿನ ಪ್ರಕರಣಕ್ಕೆ ಹತ್ತಿರದ ಹೋಲಿಕೆಗಳನ್ನು ಹೊಂದಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದೇ ಕಾರಣಕ್ಕೆ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.



ಈ ಹಿಂದೆ ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ‘ಬಾಸ್’ ಸಿನಿಮಾದ ಪ್ರದರ್ಶನ ಹಾಗೂ ಬಿಡುಗಡೆಗೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶದಿಂದಾಗಿ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಕಾನೂನು ನಿರಾಳತೆ ಸಿಕ್ಕಂತಾಗಿತ್ತು. ಈ ಯಶಸ್ಸಿನ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ್ದ ಚಿತ್ರತಂಡ, ಕಾನೂನು ಹೋರಾಟದಲ್ಲಿ ತಮಗೆ ಜಯ ಸಿಕ್ಕಿರುವುದಾಗಿ ಮತ್ತು ಸಿನಿಮಾ ನಿಗದಿತ ಸಮಯಕ್ಕೆ ಬರಲಿದೆ ಎಂದು ಘೋಷಿಸಿತ್ತು. ಆದರೆ ಈಗ ದರ್ಶನ್ ದಂಪತಿ ಹೈಕೋರ್ಟ್ ಮೆರೆಹೋಗಿರುವುದರಿಂದ ಚಿತ್ರತಂಡಕ್ಕೆ ಮತ್ತೆ ಹೊಸ ವಿಘ್ನ ಎದುರಾಗುವ ಭೀತಿ ಎದುರಾಗಿದೆ.


ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ? ಲಿಪ್‌ಸ್ಟಿಕ್, ಮೇಕಪ್ ಕಿಟ್ ರಹಸ್ಯ ಬಿಚ್ಚಿಟ್ಟ ಸಂಧ್ಯಾ ನಾಗರಾಜ್!, ದರ್ಶನ್ ಸ್ಥಿತಿ ನೋಡಿ ಬೇಜಾರಾಗುತ್ತೆ!

ಪೂರ್ವ ಯೋಜನೆಗಳ ಪ್ರಕಾರ ಜೂನ್ 19ರಂದು ‘ಬಾಸ್’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಬೇಕಿದೆ. ಇದಕ್ಕಾಗಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದ್ದು, ಪ್ರಮುಖ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜೂನ್ 19ರ ಬಿಡುಗಡೆಯ ದಿನಾಂಕದೊಂದಿಗೆ ಜಾಹೀರಾತುಗಳನ್ನು ಕೂಡ ನೀಡಲಾಗಿದೆ. ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳ ಬುಕ್ಕಿಂಗ್ ಪ್ರಕ್ರಿಯೆಗಳು ಚಾಲ್ತಿಯಲ್ಲಿರುವ ಬೆನ್ನಲ್ಲೇ, ಬಿಡುಗಡೆಗೆ ಕೇವಲ ಎರಡೇ ದಿನ ಬಾಕಿ ಇರುವಾಗ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ಚಿತ್ರದ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿ ನಿಲ್ಲಿಸಿದೆ.



ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಈ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆಯು ಜೂನ್ 17ರಂದು ನಡೆಯಲಿದೆ. ಈ ಹೈಕೋರ್ಟ್ ವಿಭಾಗೀಯ ಪೀಠ ನೀಡುವ ತೀರ್ಪಿನ ಆಧಾರದ ಮೇಲೆಯೇ ‘ಬಾಸ್’ ಸಿನಿಮಾ ಜೂನ್ 19ರಂದು ಚಿತ್ರಮಂದಿರಗಳಿಗೆ ಬರಲಿದೆಯೇ ಅಥವಾ ಮುಂದೂಡಲ್ಪಡಲಿದೆಯೇ ಎಂಬುದು ನಿರ್ಧಾರವಾಗಲಿದೆ. ಈ ಚಿತ್ರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ, ಇದು ದರ್ಶನ್ ಅವರ ಜೀವನದ ಕಥೆಯಲ್ಲ ಎಂದು ಚಿತ್ರತಂಡ ಮೊದಲಿನಿಂದಲೂ ವಾದಿಸುತ್ತಾ ಬಂದಿದ್ದರೂ, ಟೀಸರ್‌ನಲ್ಲಿರುವ ದೃಶ್ಯಗಳು ಮತ್ತು ಸಂಭಾಷಣೆಗಳು ನೈಜ ಘಟನೆಗಳಿಗೆ ತೀರ ಹತ್ತಿರವಾಗಿರುವುದರಿಂದ ಕಾನೂನು ಹೋರಾಟ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default