ಬೆಂಗಳೂರಿನ ಸೆಂಟ್ರಲ್ ಜೈಲಿನೊಳಗಿನ ಕಹಿ ಸತ್ಯಗಳು ಮತ್ತು ಅಲ್ಲಿ ನಡೆಯುತ್ತಿರುವ ವಿಐಪಿ ಸಂಸ್ಕೃತಿಯ ಬಗ್ಗೆ ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿರುವ ಸಂಧ್ಯಾ ಪವಿತ್ರ ನಾಗರಾಜ್ ಅವರು ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ನಟಿ ಪವಿತ್ರಾ ಗೌಡ ಅವರಿಗೆ ಜೈಲಿನಲ್ಲಿ ಸಿಗುತ್ತಿರುವ ರಾಜಮರ್ಯಾದೆಯ ವಿರುದ್ಧ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಂಧ್ಯಾ ನಾಗರಾಜ್ ಅವರ ಪ್ರಕಾರ, ಜೈಲಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಕೊಲೆ, ಅತ್ಯಾಚಾರ, ಸುಲಿಗೆಯಂತಹ ಘೋರ ಅಪರಾಧಗಳನ್ನು ಮಾಡಿ ಜೈಲು ಸೇರಿದವರಿಗೆ ಅಲ್ಲಿ ರಾಜಾತಿಥ್ಯ ಸಿಗುತ್ತಿದೆ. ಕೇವಲ ಮನೆಯವರಿಂದ ದೂರವಿದ್ದೇವೆ ಎನ್ನುವ ಕೊರಗನ್ನು ಬಿಟ್ಟರೆ, ಜೈಲಿನಲ್ಲಿ ಇರಲು ಯಾವುದೇ ಕಷ್ಟವಿಲ್ಲದ ವಾತಾವರಣವಿದೆ. ಧೂಮಪಾನದ ಚಟ ಇರುವವರಿಗೆ ಬೀಡಿ-ಸಿಗರೇಟ್ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಉಳಿದೆಲ್ಲ ಸೌಲಭ್ಯಗಳು ಅಲ್ಲಿ ಸುಲಭವಾಗಿ ಲಭ್ಯವಿವೆ ಎಂದು ಅವರು ಕರ್ನಾಟಕದ ಕಾರಾಗೃಹಗಳ ಸದ್ಯದ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮುಖ್ಯವಾಗಿ ಪವಿತ್ರಾ ಗೌಡ ಅವರಿಗೆ ಜೈಲಿನಲ್ಲಿ ಸಿಗುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಸಂಧ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪವಿತ್ರಾ ಗೌಡಗೆ ಹೊರಗಿನಿಂದ ಕ್ಯಾರಿಯರ್‌ನಲ್ಲಿ ಊಟ ಬರುತ್ತದೆ, ಜೊತೆಗೆ ಫೋನ್ ಬಳಕೆ, ಲಿಪ್‌ಸ್ಟಿಕ್, ಹೇರ್ ಸ್ಟ್ರೈಟ್ನರ್ ಮತ್ತು ಮೇಕಪ್ ಕಿಟ್‌ಗಳಂತಹ ಐಷಾರಾಮಿ ವಸ್ತುಗಳೂ ಸಿಗುತ್ತಿವೆ. ಆರಂಭದಲ್ಲಿ ಅವಳಿಗಾಗಿ ಒಬ್ಬ ಪ್ರತ್ಯೇಕ ಅಸಿಸ್ಟೆಂಟ್ ಇದ್ದು, ಕೋಣೆಯಲ್ಲಿ ಅವರಿಬ್ಬರೇ ಇರುತ್ತಿದ್ದರು. ಆದರೆ ಸಂಧ್ಯಾ ಅವರು ಈ ತಾರತಮ್ಯವನ್ನು ಪ್ರಶ್ನಿಸಿದ ನಂತರವೇ ಅಧಿಕಾರಿಗಳು ಆ ಕೋಣೆಗೆ ಇತರ ಐದು ಜನ ಕೈದಿಗಳನ್ನು ಸೇರಿಸಲು ಆರಂಭಿಸಿದರು. ಜೈಲಿನ ಒಳಗೂ ಸಂಧ್ಯಾ ಅವರು ಪವಿತ್ರಾ ಗೌಡಳ ಈ ನಡವಳಿಕೆಯನ್ನು ಸದಾ ಪ್ರಶ್ನಿಸುತ್ತಾ, ಆಕೆಗೆ ಬೆವರಿಳಿಸುತ್ತಿದ್ದರು ಎನ್ನಲಾಗಿದೆ.
ಇದೇ ವೇಳೆ ನಟ ದರ್ಶನ್ ಅವರ ಬಗ್ಗೆಯೂ ಮಾತನಾಡಿರುವ ಸಂಧ್ಯಾ, ದರ್ಶನ್ ಅವರನ್ನು ಜೈಲಿನಲ್ಲಿ ನೋಡಿದಾಗ ತುಂಬ ಬೇಸರವಾಗುತ್ತದೆ, ಅವರು ಸದಾ ಅತ್ಯಂತ ಮಂಕಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

