}

28 ದಿನಗಳ ರೀಚಾರ್ಜ್‌ಗೆ ಬ್ರೇಕ್? ಮೊಬೈಲ್ ಬಳಕೆದಾರರಿಗೆ 30 ದಿನಗಳ ವ್ಯಾಲಿಡಿಟಿ ಆಯ್ಕೆ

Prajwal amin
By -
0

 


ನವದೆಹಲಿ: ಪ್ರಿಪೇಯ್ಡ್ ಮೊಬೈಲ್ ಬಳಕೆದಾರರು ಬಹುದಿನಗಳಿಂದ ಎದುರಿಸುತ್ತಿದ್ದ  28 ದಿನಗಳ ರೀಚಾರ್ಜ್ ವ್ಯಾಲಿಡಿಟಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ತಿಂಗಳಿಗೆ 30 ಅಥವಾ 31 ದಿನಗಳಿದ್ದರೂ ಹಲವು ರೀಚಾರ್ಜ್ ಪ್ಲಾನ್‌ಗಳು 28 ದಿನಗಳ ಅವಧಿಯನ್ನು ಹೊಂದಿರುವುದರಿಂದ, ಗ್ರಾಹಕರು ವರ್ಷದಲ್ಲಿ ಹೆಚ್ಚುವರಿ ಆಗಿ ಒಂದು ತಿಂಗಳು ರೀಚಾರ್ಜ್ ಮಾಡಬೇಕಾಗುತ್ತದೆ ಎಂಬ ಆಕ್ಷೇಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ.


ಈ ವಿಚಾರವನ್ನು ಅಂದಿನ AAP ಪಕ್ಷದ ಸಂಸದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು 28 ದಿನಗಳ ರೀಚಾರ್ಜ್ ಅವಧಿ ಕುರಿತು ಪ್ರಶ್ನೆ ಎತ್ತಿ, ಇದರಿಂದ ಗ್ರಾಹಕರಿಗೆ ಆಗುತ್ತಿರುವ ಹೆಚ್ಚುವರಿ ವೆಚ್ಚದ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ್ದರು 


28 ದಿನಗಳ ಪ್ಲಾನ್‌ಗಳ ಬದಲಿಗೆ 30 ದಿನಗಳ ಆಯ್ಕೆಯೂ ಇದೆ


TRAIಯ ನಿಯಮಗಳ ಪ್ರಕಾರ, ಗ್ರಾಹಕರಿಗೆ 30 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಆಯ್ಕೆಯನ್ನು ನೀಡಬೇಕು. ಇದರ ಜೊತೆಗೆ, ಪ್ರತಿ ತಿಂಗಳು ಒಂದೇ ದಿನಾಂಕದಂದು ನವೀಕರಿಸಬಹುದಾದ ಪ್ಲಾನ್ ಕೂಡ ಲಭ್ಯವಿರಬೇಕು.


ಆದಾಗ್ಯೂ, 28 ದಿನಗಳ ಪ್ಲಾನ್‌ಗಳು ಸಂಪೂರ್ಣವಾಗಿ ನಿಂತಿಲ್ಲ. TRAIಯ ಪ್ರಸ್ತುತ ಟ್ಯಾರಿಫ್ ಮಾಹಿತಿಯಲ್ಲಿಯೂ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹಲವು ಪ್ರಿಪೇಯ್ಡ್ ಪ್ಲಾನ್‌ಗಳು ಕಾಣಿಸುತ್ತಿವೆ. ಅಂದರೆ ಗ್ರಾಹಕರಿಗೆ 28 ದಿನಗಳ ಆಯ್ಕೆಯ ಜೊತೆಗೆ, ಲಭ್ಯವಿರುವಲ್ಲಿ 30 ದಿನ ಅಥವಾ ಮಾಸಿಕ ನವೀಕರಣದ ಆಯ್ಕೆಯನ್ನೂ ಪರಿಶೀಲಿಸಬಹುದು.


ಡೇಟಾ ಬೇಡದವರಿಗೆ ವಾಯ್ಸ್ ಮತ್ತು SMS ಪ್ಲಾನ್


ಇಂಟರ್ನೆಟ್ ಡೇಟಾ ಅಗತ್ಯವಿಲ್ಲದೆ ಕೇವಲ ಕರೆ ಮತ್ತು SMS ಬಳಸುವ ಗ್ರಾಹಕರಿಗಾಗಿ ಪ್ರತ್ಯೇಕ ‘Voice and SMS Only’ ಪ್ಲಾನ್‌ಗಳಿಗೂ TRAI ವ್ಯವಸ್ಥೆ ಮಾಡಿದೆ. ಇಂತಹ ಪ್ಲಾನ್‌ಗಳಲ್ಲಿ ಮೊಬೈಲ್ ಡೇಟಾ ಇರುವುದಿಲ್ಲ; ಕರೆ ಮತ್ತು ಸಂದೇಶ ಸೇವೆ ಮಾತ್ರ ಲಭ್ಯವಾಗುತ್ತದೆ. ಇವು ವಿವಿಧ ಅವಧಿಗಳಿಗೆ ಲಭ್ಯವಿದ್ದು, ಕೆಲವು ಪ್ಲಾನ್‌ಗಳ ವ್ಯಾಲಿಡಿಟಿ 365 ದಿನಗಳವರೆಗೂ ಇರಬಹುದು ಎಂದು TRAI ತಿಳಿಸಿದೆ.


ಒಟ್ಟಿನಲ್ಲಿ, ಪ್ರಿಪೇಯ್ಡ್ ಗ್ರಾಹಕರು ತಮ್ಮ ಬಳಕೆಗೆ ತಕ್ಕಂತೆ ಪ್ಲಾನ್ ಆಯ್ಕೆ ಮಾಡುವ ಅವಕಾಶ ಇದೀಗ ಲಭ್ಯವಾಗಲಿದೆ .ಇಂಟರ್ನೆಟ್ ಹೆಚ್ಚು ಬಳಸುವವರಿಗೆ ಡೇಟಾ ಒಳಗೊಂಡ ಪ್ಲಾನ್‌ಗಳು, ಡೇಟಾ ಅಗತ್ಯವಿಲ್ಲದವರಿಗೆ ವಾಯ್ಸ್ ಮತ್ತು SMS ಪ್ಲಾನ್‌ಗಳು ಹಾಗೂ 30 ದಿನಗಳ ವ್ಯಾಲಿಡಿಟಿ ಅಥವಾ ತಿಂಗಳ ಅದೇ ದಿನಾಂಕಕ್ಕೆ ನವೀಕರಿಸಬಹುದಾದ ಆಯ್ಕೆಗಳು ಇದೆ.


ಹೀಗಾಗಿ, ರೀಚಾರ್ಜ್ ಮಾಡುವ ಮೊದಲು ಕೇವಲ ಬೆಲೆಯನ್ನು ನೋಡದೆ, ವ್ಯಾಲಿಡಿಟಿ ಎಷ್ಟು ದಿನ, ಡೇಟಾ ಎಷ್ಟು, ಕರೆ-ಎಸ್‌ಎಂಎಸ್ ಸೌಲಭ್ಯ ಏನು ಮತ್ತು ಮುಂದಿನ ರೀಚಾರ್ಜ್ ಯಾವಾಗ ಬೇಕಾಗುತ್ತದೆ ಎಂಬುದನ್ನೂ ಪರಿಶೀಲಿಸುವುದು ಉತ್ತಮ 

About the Author

PRAJWAL prajwal covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default