ಮಂಗಳೂರು: ಮೀನುಗಾರಿಕಾ ಬಂದರಿನ ಸಮೀಪವಿರುವ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಎರಡು ಮೀನುಗಾರಿಕಾ ಬೋಟ್‌ಗಳು ಸಮುದ್ರಪಾಲಾಗಿವೆ. ಸಹೋದ್ಯೋಗಿ ಮೀನುಗಾರರ ಸಮಯಪ್ರಜ್ಞೆಯಿಂದಾಗಿ ಎರಡೂ ಬೋಟ್‌ಗಳಲ್ಲಿದ್ದ 12 ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಮಂಗಳವಾರ ನಡೆದಿದೆ.
ಉಳ್ಳಾಲ ಆಲೇಕಲದ ಶರೀಫ್ ಎಂಬವರಿಗೆ ಸೇರಿದ 13 ಮೀಟರ್ ಉದ್ದದ ‘ಮರ್ಮೇಡ್ II’ (ಟ್ರಾಲರ್ ಬೋಟ್) ಹಾಗೂ ಕೂಳೂರಿನ ಬೆಂಗ್ರೆ ಕಸಬಾದ ಅಬೂಬಕ್ಕರ್ ಅಜ್ಮಲ್ ಅವರಿಗೆ ಸೇರಿದ ‘ಅನಿಕ್’ (ಸಣ್ಣ ಮರದ ಬೋಟ್) ಮಂಗಳವಾರ ಸಂಜೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.
ಅಲೆಗಳ ರಭಸಕ್ಕೆ ಒಡೆದ ಮರದ ಹಲಗೆಗಳು
ಅಳಿವೆ ಬಾಗಿಲು ದಾಟುವ ವೇಳೆ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಬೋಟ್‌ಗಳಿಗೆ ರಭಸವಾಗಿ ಅಪ್ಪಳಿಸಿವೆ. ಪರಿಣಾಮವಾಗಿ ಬೋಟ್‌ಗಳು ಎತ್ತರಕ್ಕೆ ಜಿಗಿದು ನೀರಿಗೆ ಬಿದ್ದಿದ್ದು, ತಳಭಾಗದ ಮರದ ಹಲಗೆಗಳು ತುಂಡಾಗಿ ಒಡೆದುಹೋಗಿವೆ. ‘ಮರ್ಮೇಡ್ II’ ಬೋಟ್‌ನ ತಳಭಾಗ ಒಡೆದು ನೀರು ತುಂಬಿಕೊಂಡರೆ, ‘ಅನಿಕ್’ ಬೋಟ್‌ನ ಒಂದು ಪಾರ್ಶ್ವ ಸಂಪೂರ್ಣ ಜಖಂಗೊಂಡು ನೀರುಪಾಲಾಗಿದೆ.
ದೋಣಿಗಳು ಮುಳುಗಲಾರಂಭಿಸುತ್ತಿದ್ದಂತೆಯೇ ಸಮೀಪದಲ್ಲೇ ಇದ್ದ ಇತರ ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ತಕ್ಷಣವೇ ಸ್ಪಂದಿಸಿ, ಅಪಾಯದಲ್ಲಿದ್ದ 12 ಮೀನುಗಾರರನ್ನು ತಮ್ಮ ದೋಣಿಗಳಿಗೆ ಹತ್ತಿಸಿಕೊಂಡು ದಡಕ್ಕೆ ಕರೆತಂದಿದ್ದಾರೆ.
ಬಿಕಟ ಪರಿಸ್ಥಿತಿಯ ನಡುವೆಯೂ ಮುಳುಗುತ್ತಿದ್ದ ದೋಣಿಗಳನ್ನು ದಡಕ್ಕೆ ಎಳೆಯುವ ಕಾರ್ಯಾಚರಣೆ ನಡೆದಿದೆ. ಹಗ್ಗ ಕಟ್ಟಿ ಎಳೆಯುವ ಮೂಲಕ ಒಂದು ಬೋಟನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದ್ದು, ಮತ್ತೊಂದು ಬೋಟನ್ನು ಎಳೆಯುತ್ತಿದ್ದಾಗ ಹಗ್ಗ ತುಂಡಾದ ಕಾರಣ ಅದು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಪ್ರಾಣಹಾನಿ ತಪ್ಪಿದೆಯಾದರೂ ಎರಡೂ ಬೋಟ್‌ಗಳಿಗೆ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

