ಕುಂದಾಪುರ, ಸೆ. 1: ಗಂಗೊಳ್ಳಿ ನದೀಮುಖ ಪ್ರದೇಶದಲ್ಲಿ ಆಗಸ್ಟ್ 26ರಂದು ‘ಶ್ರೀ ಬಾಲಾಂಜನೇಯ’ ದೋಣಿಯೊಂದಿಗೆ ಸಮುದ್ರದಲ್ಲಿ ಮುಳುಗಿದ್ದ ಮೀನುಗಾರಿಕಾ ಬಲೆಗಳನ್ನು ಮೀನುಗಾರರ ತಂಡ ಯಶಸ್ವಿಯಾಗಿ ಮೇಲಕ್ಕೆತ್ತಿ ದಡಕ್ಕೆ ತಂದಿದೆ.
ಕಾಂಚನಗಂಗಾ ದೋಣಿಯ ಮಾಲೀಕ ಚಂದ್ರ ಖಾರ್ವಿ ನೀಡಿದ ಮಾಹಿತಿ ಆಧರಿಸಿ, ಗಂಗೊಳ್ಳಿಯ ದಿನೇಶ್ ಖಾರ್ವಿ ನೇತೃತ್ವದಲ್ಲಿ 34 ಮಂದಿ ಮೀನುಗಾರರು ಪರ್ಸ್‌ಸೀನ್ ದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು. ಇತರ ಮೀನುಗಾರರ ಸಹಕಾರದೊಂದಿಗೆ ಸಮುದ್ರದಲ್ಲಿ ಮುಳುಗಿದ್ದ ಬಲೆಗಳನ್ನು ಪತ್ತೆಹಚ್ಚಿ ಹೊರತೆಗೆಯುವಲ್ಲಿ ತಂಡ ಯಶಸ್ವಿಯಾಯಿತು.
ಬೆಳಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ತಂಡ, ಸೋಮವಾರ ಸಂಜೆ 4 ಗಂಟೆಯವರೆಗೆ ಸಮುದ್ರದಲ್ಲೇ ಕಾರ್ಯಾಚರಣೆ ಮುಂದುವರಿಸಿತು. ಸತತ ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಸುಮಾರು 700 ವಾರ ಉದ್ದದ ಮೀನುಗಾರಿಕಾ ಬಲೆಯನ್ನು ಸಮುದ್ರದಿಂದ ಹೊರತೆಗೆದು ದಡಕ್ಕೆ ತರಲಾಯಿತು.
ಬಳಿಕ ಬಲೆಯನ್ನು ಸಂಬಂಧಪಟ್ಟ ದೋಣಿ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಸಮುದ್ರದಲ್ಲಿ ಮುಳುಗಿ ಇದೀಗ ಹೊರತೆಗೆಯಲಾದ ಈ ಮೀನುಗಾರಿಕಾ ಬಲೆಯ ಮೌಲ್ಯ ಸುಮಾರು ₹30 ಲಕ್ಷ ಎಂದು ಅಂದಾಜಿಸಲಾಗಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

