}

ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ಓಡಾಟಕ್ಕೆ ಸಿದ್ಧತೆ: 8 ಗಂಟೆ 20 ನಿಮಿಷದ ಟ್ರಯಲ್ ರನ್

suddilive.com
By -
0

 


ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲಿನ ಚಾಲನಾ ಸಮಯ ಹಾಗೂ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಭಾರತೀಯ ರೈಲ್ವೆಯು 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ಖಾಲಿ ರೇಕ್‌ನ ಪ್ರಾಯೋಗಿಕ ಸಂಚಾರ ಸೆ.5ರಂದು ನಡೆಯಲಿದೆ.


ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ಹಾಸನ, ಸುಬ್ರಹ್ಮಣ್ಯ ಮತ್ತು ಪಡೀಲ್ ಮೂಲಕ ಪ್ರಯಾಣಿಸಿ ಮಧ್ಯಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ. ಇದು ಮಧ್ಯಾಹ್ನ 3 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ರಾತ್ರಿ 11 ಗಂಟೆಗೆ ಯಶವಂತಪುರ ತಲುಪುತ್ತದೆ.


ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹಿಂದಿನ ಪ್ರಾಯೋಗಿಕ ಸಂಚಾರವನ್ನು ಆಗಸ್ಟ್ 12ರಂದು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವೆ ಘಾಟ್ ವಿಭಾಗದ ಮೂಲಕ ನಡೆಸಲಾಯಿತು. ಘಾಟ್ ಪ್ರದೇಶದಲ್ಲಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ರೇಕ್ ಲಭ್ಯವಿಲ್ಲದ ಕಾರಣ ಪ್ರಕ್ರಿಯೆ ತಡವಾಗಿತ್ತು. ಈ ಟ್ರಯಲ್‌ ರನ್‌ ಮುಖ್ಯವಾಗಿ ತಾಂತ್ರಿಕ ಅಂಶಗಳು (Technical problem) ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಮೇಲೆ ಕೇಂದ್ರೀಕರಿಸಿತ್ತು.

ಪ್ರಾಯೋಗಿಕ ಸಂಚಾರದ ಸಂಭಾವ್ಯ ವೇಳಾಪಟ್ಟಿ ಮತ್ತು ನಿಲುಗಡೆಗಳು


1. ಯಶವಂತಪುರ ಜಂಕ್ಷನ್ ➔ ಮಂಗಳೂರು ಸೆಂಟ್ರಲ್

ಯಶವಂತಪುರ ಜಂಕ್ಷನ್ (YPR): ಬೆಳಗ್ಗೆ 06:05 (ನಿರ್ಗಮನ)

ಹಾಸನ ಜಂಕ್ಷನ್ (HAS): ಬೆಳಗ್ಗೆ 09:00 / 09:05

ಸಕಲೇಶಪುರ (SKLR): ಬೆಳಗ್ಗೆ 09:55 / 10:00

ಸುಬ್ರಹ್ಮಣ್ಯ ರೋಡ್ (SBHR): ಮಧ್ಯಾಹ್ನ 12:30 / 12:35

ಮಂಗಳೂರು ಸೆಂಟ್ರಲ್ (MAQ): ಮಧ್ಯಾಹ್ನ 02:25 (ಆಗಮನ)


2. ಮಂಗಳೂರು ಸೆಂಟ್ರಲ್ ➔ ಯಶವಂತಪುರ ಜಂಕ್ಷನ್

ಮಂಗಳೂರು ಸೆಂಟ್ರಲ್ (MAQ): ಮಧ್ಯಾಹ್ನ 03:00 (ನಿರ್ಗಮನ)

ಸುಬ್ರಹ್ಮಣ್ಯ ರೋಡ್ (SBHR): ಸಂಜೆ 04:30 / 04:35

ಸಕಲೇಶಪುರ (SKLR): ಸಂಜೆ 06:30 / 06:35

ಹಾಸನ ಜಂಕ್ಷನ್ (HAS): ರಾತ್ರಿ 07:20 / 07:30

ಯಶವಂತಪುರ ಜಂಕ್ಷನ್ (YPR): ರಾತ್ರಿ 11:00 (ಆಗಮನ)


ಪ್ರಯಾಣವು 8 ಗಂಟೆ 20 ನಿಮಿಷ ತೆಗೆದುಕೊಳ್ಳುವ ನಿರೀಕ್ಷೆ


ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, ಪ್ರಯಾಣವು 8 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ನಿಗದಿತ ಸಮಯದೊಳಗೆ ಪ್ರಾಯೋಗಿಕ ಓಟ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಮುಖ್ಯ ನಿಯಂತ್ರಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.



ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆಯ ರೇಕ್‌ಗೆ ಕಾಯುತ್ತಿದ್ದ ರೈಲು


ವಂದೇ ಭಾರತ್ ರೈಲು ಸಾಮಾನ್ಯವಾಗಿ ಅತ್ಯಾಧುನಿಕ ಎಲೆಕ್ಟ್ರೋ-ನ್ಯೂಮ್ಯಾಟಿಕ್ (EP) ಡಿಸ್ಕ್ ಬ್ರೇಕ್ ಹಾಗೂ Regenerative Braking ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗವು ಅತ್ಯಂತ ಕಡಿದಾದ ಇಳಿಜಾರು ಹೊಂದಿದೆ. ಹೀಗಾಗಿಯೇ ಈಗ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸುರಕ್ಷತೆಗಾಗಿ ಬ್ಯಾಂಕರ್ ಇಂಜಿನ್‌ಗಳನ್ನು (ಹೆಚ್ಚುವರಿ ಇಂಜಿನ್) ಜೋಡಿಸಲಾಗುತ್ತದೆ. ಇವುಗಳನ್ನು ಜೋಡಿಸಲು ಮತ್ತು ಕಳಚಲು ಸುಮಾರು 15 ನಿಮಿಷ ಬೇಕಾಗುತ್ತದೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Post a Comment

0 Comments

Post a Comment (0)
3/related/default