ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಂತಿಮ ಹಂತದಲ್ಲಿರುವ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಊರಿನ ಹೆಸರು ಹಾಗೂ ಸಂಪರ್ಕ ರಸ್ತೆಗಳ ಮಾಹಿತಿ ನೀಡುವ ದಾರಿ ಸೂಚಕ ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸುತ್ತಿದೆ. ಆದರೆ, ಹಲವು ಕಡೆಗಳಲ್ಲಿ ಅಳವಡಿಸಲಾದ ಫಲಕಗಳಲ್ಲಿ ಸ್ಥಳದ ಹೆಸರು ಮತ್ತು ದಿಕ್ಕಿನ ಕುರಿತು ಗಂಭೀರ ತಪ್ಪುಗಳಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೂರಿಕುಮೇರು ಸಮೀಪದ ಹೈವೇ ಚಿಕನ್ ಸ್ಟಾಲ್ ಬಳಿ ಅಳವಡಿಸಿರುವ ಒಂದು ಸೂಚನಾ ಫಲಕದಲ್ಲಿ "ಬಾಳ್ತಿಲ ಹೋಗುವ ದಾರಿ" ಎಂದು ಉಲ್ಲೇಖಿಸಲಾಗಿದೆ. ಆದರೆ, ಫಲಕ ಸೂಚಿಸುವ ದಿಕ್ಕಿನಲ್ಲಿ ಸಾಗಿದರೆ ಬಾಳ್ತಿಲ ಗ್ರಾಮಕ್ಕೆ ಹೋಗುವ ರಸ್ತೆ ಅಲ್ಲದೆ ಸ್ಥಳೀಯ ನಿವಾಸಿ ಯೂಸುಫ್ ಹಾಜಿಯವರ ಮನೆಗೆ ಹೋಗುವ ರಸ್ತೆಯೇ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಾಳ್ತಿಲ ಗ್ರಾಮ ಅಥವಾ ಬಾಳ್ತಿಲ ಗ್ರಾಮ ಪಂಚಾಯತ್‌ಗೆ ತೆರಳುವ ರಸ್ತೆ ಸೂಚಿಸಬೇಕಾದರೆ, ನೀರಪಾದೆ ರಸ್ತೆಯ ಜಂಕ್ಷನ್‌ನಲ್ಲಿ ಫಲಕ ಅಳವಡಿಸಬೇಕಾಗಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ತಪ್ಪು ಸ್ಥಳದಲ್ಲಿ ಫಲಕ ಅಳವಡಿಸಿರುವುದರಿಂದ ವಾಹನ ಸವಾರರು ಹಾಗೂ ಹೊಸದಾಗಿ ಈ ಪ್ರದೇಶಕ್ಕೆ ಬರುವವರು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ, ಎಲ್ಲೆಡೆ "ಬಿ.ಸಿ.ರೋಡ್" ಎಂದೇ ಪ್ರಸಿದ್ಧವಾಗಿರುವ ಸ್ಥಳದ ಹೆಸರನ್ನು ಫಲಕದಲ್ಲಿ "ಬಿಸಿ ರಸ್ತೆ" ಎಂದು ನಮೂದಿಸಿರುವುದು ಸಹ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಇಂತಹ ಭಾಷಾ ಹಾಗೂ ಸ್ಥಳ ಮಾಹಿತಿಯ ದೋಷಗಳು ಹಲವು ಕಡೆಗಳಲ್ಲಿ ಕಂಡುಬರುತ್ತಿವೆ ಎನ್ನಲಾಗಿದೆ.
ದಾರಿ ಸೂಚಕ ಫಲಕಗಳನ್ನು ಅಳವಡಿಸುವ ಮೊದಲು ಸಂಬಂಧಿತ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಅಧಿಕಾರಿಗಳು ಅಥವಾ ಆ ಭಾಗದ ಹಿರಿಯರು ಹಾಗೂ ಸಾಮಾಜಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದರೆ ಇಂತಹ ತಪ್ಪುಗಳನ್ನು ತಪ್ಪಿಸಬಹುದಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಅಳವಡಿಸಿರುವ ತಪ್ಪು ಮಾಹಿತಿಯ ಫಲಕಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಸ್ಥಳಗಳ ನಿಖರ ಹೆಸರು ಹಾಗೂ ಸರಿಯಾದ ದಿಕ್ಕಿನ ಮಾಹಿತಿಯೊಂದಿಗೆ ಶೀಘ್ರ ತಿದ್ದುಪಡಿ ಮಾಡಬೇಕೆಂದು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

