}

ಕಾರ್ಕಳ: ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್ ಕಳವು ಪ್ರಕರಣ – ನಕಲಿ ಸಹಿಯಿಂದ ಹಣ ಎಗರಿಸಲು ಯತ್ನಿಸಿದ ಕಂಪ್ಯೂಟರ್ ಆಪರೇಟರ್ ಬಂಧನ

suddilive.com
By -
0


ಕಾರ್ಕಳ: ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್‌ಗಳನ್ನು ಕಳವುಗೈದು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರ ನಕಲಿ ಸಹಿ ಬಳಸಿ ಹಣ ಡ್ರಾ ಮಾಡಲು ಯತ್ನಿಸಿದ ಆರೋಪದಲ್ಲಿ ದೇವಸ್ಥಾನದ ಮಾಜಿ ಕಂಪ್ಯೂಟರ್ ಆಪರೇಟರ್‌ನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತನನ್ನು ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ನಿವಾಸಿ ಅಕ್ಷಯ ದೇವಾಡಿಗ (29) ಎಂದು ಗುರುತಿಸಲಾಗಿದೆ. ಆತ ಕಳೆದ ನಾಲ್ಕು ವರ್ಷಗಳಿಂದ ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.


ದೇವಸ್ಥಾನದಲ್ಲಿ ವಿವಿಧ ಸೇವೆಗಳ ಮೂಲಕ ಸಂಗ್ರಹವಾಗುತ್ತಿದ್ದ ಹಣದ ಲೆಕ್ಕಪತ್ರಗಳ ಈ ಸಾಲಿನ ಪರಿಶೀಲನೆ ವೇಳೆ ಹಣಕಾಸಿನ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಅಕ್ಷಯನಿಂದ ಸ್ಪಷ್ಟನೆ ಕೇಳಿದರೂ ಆತ ಯಾವುದೇ ಸಮರ್ಪಕ ಉತ್ತರ ನೀಡದೆ, ಮೇ 7ರಂದು ರಾಜೀನಾಮೆ ಸಲ್ಲಿಸಿ ಕೆಲಸದಿಂದ ದೂರ ಉಳಿದಿದ್ದ ಎಂದು ತಿಳಿದುಬಂದಿದೆ.


ತನಿಖೆಯ ವೇಳೆ, ರಾಜೀನಾಮೆ ನೀಡುವ ಸಂದರ್ಭದಲ್ಲೇ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ)ಯಲ್ಲಿದ್ದ ದೇವಸ್ಥಾನದ ಎರಡು ಖಾತೆಗಳಿಗೆ ಸಂಬಂಧಿಸಿದ ಒಟ್ಟು ಆರು ಚೆಕ್‌ಗಳನ್ನು ಆತ ಕಳವುಗೈದಿರುವುದು ಬಹಿರಂಗವಾಗಿದೆ.


ನಂತರ ಜೂನ್ 24ರಂದು ಕಳವುಗೈದ ಚೆಕ್‌ಗಳ ಮೂಲಕ ಹಣ ಡ್ರಾ ಮಾಡಲು ಬ್ಯಾಂಕ್‌ಗೆ ತೆರಳಿದ್ದಾನೆ. ಆದರೆ ಚೆಕ್ ಮೇಲಿನ ಸಹಿಯ ಬಗ್ಗೆ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಹಣ ಪಾವತಿಸಲು ನಿರಾಕರಿಸಿ, ತಕ್ಷಣ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.


ಆರೋಪಿಯು ಅಧ್ಯಕ್ಷರ ನಕಲಿ ಸಹಿಯನ್ನು ಬಳಸಿ ದೇವಸ್ಥಾನದ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಈ ಸಂಬಂಧ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಬಂಗೇರ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಅಕ್ಷಯ ದೇವಾಡಿಗನನ್ನು ಬಂಧಿಸಿದ್ದಾರೆ 

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default