ಕಾಮಿಡಿ ಶೋ ಒಂದರಲ್ಲಿ ಮೃ#ತದೇಹಗಳ ಖಾಸಗಿ ಅಂಗಗಳ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿ ಭಾರಿ ಆಕ್ರೋಶಕ್ಕೆ ಈಡಾಗಿದ್ದ ಮುಂಬೈ ಕೆಇಎಂ ಆಸ್ಪತ್ರೆಯ ವೈದ್ಯೆ ಸೇಜಲ್ ಪವಾರ್ ಕೊನೆಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನು ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ
.
ಹಾಸ್ಯನಟ ಪ್ರಣೀತ್ ಮೋರೆ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸೇಜಲ್ ಪವಾರ್ ಅವರೊಂದಿಗೆ ಸಂವಾದ ನಡೆದಿತ್ತು. ಈ ವೇಳೆ ವೈದ್ಯಕೀಯ ಶಿಕ್ಷಣದ ಸಂದರ್ಭದಲ್ಲಿ ಬಳಸಲಾಗುವ ಶವಗಳ ಅಂಗರಚನಾ ಶಾಸ್ತ್ರದ ಅಧ್ಯಯನ ನೆನಪಿಸಿಕೊಂಡಿದ್ದ ಅವರು, ತಾವು ಮತ್ತು ತಮ್ಮ ಸಹೋದ್ಯೋಗಿಗಳು ಪುರುಷ ಶವಗಳ ಖಾಸಗಿ ಅಂಗಗಳ ಗಾತ್ರವನ್ನು ಹೋಲಿಕೆ ಮಾಡುತ್ತಿದ್ದೆವು ಎಂದು ಹಾಸ್ಯ ಮಾಡಿದ್ದರು. ಶವಪರೀಕ್ಷೆ ಮತ್ತು ಮೃತದೇಹಗಳೊಂದಿಗೆ ಕೆಲಸ ಮಾಡುವಾಗ ವೈದ್ಯರು ಗಂಭೀರವಾಗಿರುತ್ತಾರಾ ಅಥವಾ ಜೋಕ್ ಮಾಡುತ್ತಾರಾ ಎಂಬ ಹಾಸ್ಯನಟನ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದರು.
ಇದರ ವಿಡಿಯೋ ತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವೈದ್ಯಕೀಯ ವಲಯ ಮತ್ತು ಸಾರ್ವಜನಿಕರಿಂದ ತೀವ್ರ ಆ#ಕ್ರೋಶ ವ್ಯಕ್ತವಾಗಿತ್ತು. ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಜನರು ತಮ್ಮ ದೇಹವನ್ನು ದಾನ ಮಾಡುತ್ತಾರೆ. ಅಂತಹ ಶವಗಳಿಗೆ ಕನಿಷ್ಠ ಗೌರವ ನೀಡದೇ ಈ ರೀತಿ ಸಾರ್ವಜನಿಕವಾಗಿ ಅವಹೇಳನ ಮಾಡುವುದು ವೈದ್ಯಕೀಯ ನೈತಿಕತೆಗೆ ವಿರುದ್ಧವಾದುದು ಎಂದು ಹಲವು ವೈದ್ಯರು ಮತ್ತು ವಿದ್ಯಾರ್ಥಿಗಳು ಕಿಡಿಕಾರಿದ್ದರು. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಅಂಗಾಂಗ ಮತ್ತು ದೇಹ ದಾನ ಮಾಡುವ ಸಾರ್ವಜನಿಕರ ನಂಬಿಕೆಯನ್ನು ಹುಸಿಗೊಳಿಸುತ್ತವೆ ಎಂಬ ಆತಂಕವೂ ವ್ಯಕ್ತವಾಗಿತ್ತು.
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡ ವೈದ್ಯೆ ಸೇಜಲ್ ಪವಾರ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ. ವಿಡಿಯೋವನ್ನು ಮತ್ತೊಮ್ಮೆ ನೋಡಿದಾಗ ಜನರು ಯಾಕೆ ಕೋಪಗೊಂಡಿದ್ದಾರೆ ಎಂಬುದು ನನಗೆ ಅರ್ಥವಾಯಿತು. ವಿಷಯವು ಅತ್ಯಂತ ಸೂಕ್ಷ್ಮವಾಗಿದ್ದು, ನನ್ನ ಮಾತುಗಳು ತಪ್ಪು ಸಂದೇಶ ರವಾನಿಸಿವೆ. ಯಾರಿಗೂ ಅಗೌರವ ತೋರುವ ಉದ್ದೇಶ ನನಗಿರಲಿಲ್ಲ. ಆದರೂ ನನ್ನ ಮಾತುಗಳಿಂದ ಉಂಟಾದ ಪರಿಣಾಮಕ್ಕೆ ನಾನು ಹೊಣೆಯಾಗುತ್ತೇನೆ. ಇದನ್ನು ಒಂದು ಪಾಠವಾಗಿ ಸ್ವೀಕರಿಸಿದ್ದು, ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಇದೇ ವೇಳೆ, ಇತ್ತೀಚೆಗೆ ಹಿಮಾಂಶು ಜಾಗ್ರಾ ಎಂಬುವವರು ಡೇಟಿಂಗ್ ವಿಚಾರವಾಗಿ ಮಾಡಿದ್ದ ಮಹಿಳಾ ವಿರೋಧಿ ಕಾಮೆಂಟ್ ಗೂ ಮತ್ತು ಈ ಘಟನೆಗೂ ಸಾಮಾಜಿಕ ಜಾಲತಾಣಗಳಲ್ಲಿ ಹೋಲಿಕೆ ಮಾಡಲಾಗುತ್ತಿದ್ದು, ಲಿಂಗಭೇದವಿಲ್ಲದೆ ತಪ್ಪು ಮಾಡಿದಾಗ ಜವಾಬ್ದಾರಿ ಮತ್ತು ನೈತಿಕತೆ ಎಲ್ಲರಿಗೂ ಒಂದೇ ಆಗಿರಬೇಕು ಎಂಬ ಚರ್ಚೆಗಳು ಆರಂಭವಾಗಿವೆ. ಇನ್ನು ವಿವಾದಕ್ಕೆ ಕಾರಣವಾದ ವಿಡಿಯೋ ಕ್ಲಿಪ್‌ಗಳನ್ನು ಹಂಚಿಕೊಂಡಿದ್ದ ಹಾಸ್ಯನಟ ಪ್ರಣೀತ್ ಮೋರೆ ಕೂಡ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ, ಕಾಮಿಡಿ ಶೋ ನೆಪದಲ್ಲಿ ಆರಂಭವಾದ ಈ ಘಟನೆಯು ಈಗ ವೈದ್ಯಕೀಯ ವೃತ್ತಿಪರ ನೈತಿಕತೆ, ದೇಹ ದಾನಿಗಳ ಮೇಲಿನ ಗೌರವ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಹಾಸ್ಯದ ಮಿತಿಗಳ ಬಗ್ಗೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

