ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಬಿಡುಗಡೆಯಾಗಿರುವ ‘ಮ್ಯಾಂಗೋ ಪಚ್ಚ’ ಸಿನಿಮಾ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೊ ಆಗಿ ಭರ್ಜರಿಯಾಗಿ ಪದಾರ್ಪಣೆ ಮಾಡಿದ್ದಾರೆ. ಚಿತ್ರರಂಗದಲ್ಲಿ ದಶಕಗಳ ಕಾಲ ತನ್ನದೇ ಆದ ಛಾಪು ಮೂಡಿಸಿರುವ ಮಾವ ಕಿಚ್ಚ ಸುದೀಪ್ ಅವರ ನೆರಳಿನಲ್ಲಿಯೇ ಬೆಳೆದು ದೊಡ್ಡವರಾದ ಸಂಚಿತ್, ಮೊದಲ ಸಿನಿಮಾದಲ್ಲಿಯೇ ಮಾವನಂತೆಯೇ ಆಕರ್ಷಕ ನಟನೆ ಹಾಗೂ ಅದ್ಭುತ Screen Presence ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಭರವಸೆಯ ನಟನಾಗಿ ಹೊರಹೊಮ್ಮಿರುವ ಸಂಚಿತ್ ಅವರ ನಟನಾ ಕೌಶಲದ ಬಗ್ಗೆ ಈಗ ಗಾಂಧಿನಗರದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.
ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸು ಮತ್ತು ಪ್ರೇಕ್ಷಕರ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಕಂಡು ಕಿಚ್ಚ ಸುದೀಪ್ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಯ ಸಹಯೋಗದೊಂದಿಗೆ ಸುದೀಪ್ ಅವರು ತಮ್ಮದೇ ಸ್ವಂತ ಬ್ಯಾನರ್ ಆದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್’ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಹೊಸ ಪ್ರತಿಭೆಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಮಾಡಲಾದ ಈ ಒಂದು ಪ್ರಾಮಾಣಿಕ ಪ್ರಯತ್ನಕ್ಕೆ ಕನ್ನಡ ಚಿತ್ರರಂಗದ ಪ್ರೇಕ್ಷಕರು ಪ್ರೀತಿಯ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡವು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಳ್ಳಲು ಸುದ್ದಿಗೋಷ್ಠಿಯೊಂದನ್ನು ಹಮ್ಮಿಕೊಂಡಿತ್ತು. ಚಿತ್ರದ ಸಕ್ಸಸ್ ಬಗ್ಗೆ ಇಡೀ ತಂಡ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಾಧ್ಯಮದವರಿಂದ ಇದ್ದಕ್ಕಿದ್ದಂತೆ ‘ನೆಪೋಟಿಸಂ’ (ಬಂಧು-ಬಳಗ ಪ್ರೀತಿ) ಕುರಿತಾದ ಪ್ರಶ್ನೆಯೊಂದು ಎದುರಾಯಿತು. ಈ ಪ್ರಶ್ನೆ ಕೇಳುತ್ತಿದ್ದಂತೆ ನಟ ಸುದೀಪ್ ಅವರು ವೇದಿಕೆಯಲ್ಲೇ ತೀವ್ರವಾಗಿ ಗರಂ ಆದರು. ವರದಿ ಸುದ್ದಿ ಲೈವ್ ಡಾಟ್ ಕಾಮ್
ನೆಪೋಟಿಸಂ ಕುರಿತು ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಸುದೀಪ್, "ಈ ನೆಪೋಟಿಸಂ ಎನ್ನುವ ಪ್ರಶ್ನೆಯನ್ನು ನೀವು ಚಿತ್ರರಂಗದ ಪ್ರತಿಯೊಬ್ಬರಿಗೂ ಕೇಳ್ತೀರಾ? ಒಂದು ವೇಳೆ ಇದು ನಿಜವೇ ಆಗಿದ್ದರೆ ನಮ್ಮ ಸ್ಯಾಂಡಲ್‌ವುಡ್‌ನ ಹೆಮ್ಮೆಯ ದೊಡ್ಮನೆಯಿಂದಲೇ ಇದು ಶುರುವಾಯ್ತಲ್ಲ. ನೆಪೋಟಿಸಂ ಎನ್ನುವ ಪರಿಕಲ್ಪನೆ ನಿಜವಾಗಿಯೂ ಇದ್ದಿದ್ದರೆ ಡಾ. ರಾಜ್‌ಕುಮಾರ್ ಅವರ ಮಕ್ಕಳಿಗೂ ನೀವು ಇದೇ ಪ್ರಶ್ನೆಯನ್ನು ಕೇಳಬೇಕಿತ್ತಲ್ಲವೇ? ಕೇವಲ ಚಿತ್ರರಂಗ ಮಾತ್ರವಲ್ಲ, ಉದ್ಯಮ ರಂಗದಲ್ಲಿರುವ ಅಂಬಾನಿ ಅವರ ಕುಟುಂಬವನ್ನೂ ನೀವು ಇದೇ ಪ್ರಶ್ನೆ ಕೇಳಬೇಕು. ಹೀಗೆ ಸಿನಿಮಾ ರಂಗಕ್ಕೆ ಹೋಲಿಸುವುದು ತಪ್ಪು. ಬಾಲಿವುಡ್‌ನಲ್ಲೋ ಅಥವಾ ಬಾಂಬೆಯಲ್ಲೋ ಹುಟ್ಟಿಕೊಂಡ ಯಾವುದೋ ಒಂದು ವಿವಾದಾತ್ಮಕ ಪದವನ್ನು ಇಟ್ಟುಕೊಂಡು ಅದನ್ನು ಕರ್ನಾಟಕಕ್ಕೆ ಎಳೆದು ತರಬೇಡಿ" ಎಂದು ನೇರವಾಗಿ ಆಕ್ರೋಶ ಹೊರಹಾಕಿದರು.
ಕನ್ನಡ ಚಿತ್ರರಂಗದ ಇತಿಹಾಸವನ್ನು ನೆನಪಿಸಿದ ಸುದೀಪ್, "ವರನಟ ಡಾ. ರಾಜ್‌ಕುಮಾರ್ ಅವರ ಕಾಲದಿಂದಲೂ ನಮ್ಮ ಚಿತ್ರರಂಗದಲ್ಲಿ ಒಂದು ಪದ್ಧತಿಯಿದೆ. ಬಹುಶಃ ಕುಟುಂಬದಲ್ಲಿ ಆ ಯೋಗ್ಯತೆ, ಅರ್ಹತೆ ಮತ್ತು ಕಲೆ ಒಲಿದು ಬಂದರೆ ಮಾತ್ರ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ. ಕಲಾ ಸರಸ್ವತಿ ಒಲಿದು, ಕನ್ನಡದ ಪ್ರೇಕ್ಷಕರು ಅವರನ್ನು ಇಷ್ಟಪಟ್ಟರೆ ಮುಗಿಯಿತು, ಅವರು ಚಿತ್ರರಂಗದಲ್ಲಿ ನೆಲೆಸುತ್ತಾರೆ. ಇದು ಯಾರಿಗೆ ಅರ್ಹತೆ ಇದೆಯೋ ಅವರ ಜಾಗವಾಗಬಹುದೇ ಹೊರತು ಕೇವಲ ಕುಟುಂಬದ ಹಿನ್ನೆಲೆ ಇದ್ದ ತಕ್ಷಣ ಯಾರು ಇಲ್ಲಿ ಬೆಳೆಯಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು. ವರದಿ ಸುದ್ದಿ ಲೈವ್ ಡಾಟ್ ಕಾಮ್
ಇದೇ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಮತ್ತು ದಿವಂಗತ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ ಸುದೀಪ್, "ಇವತ್ತು ಶಿವಣ್ಣ ಅವರು ನಮ್ಮ ಚಿತ್ರರಂಗದ ಮೇರು ನಟರಾಗಿದ್ದಾರೆ. ನಾವು ಅವರನ್ನು ನೋಡಿ ಕಲೆ ಮತ್ತು ಶಿಸ್ತನ್ನು ಸ್ಫೂರ್ತಿಯಾಗಿ ಪಡೆದಿದ್ದೀವಿ. ಅವರ ಬದುಕಿನ ಉದಾಹರಣೆಯನ್ನು ತಗೊಂಡು ಇವತ್ತು ಚಿತ್ರರಂಗದಲ್ಲಿ ಎಷ್ಟು ಜನ ಹೊಸಬರು ಬೆಳೀತಿದ್ದಾರೆ ಗೊತ್ತಾ? ಇನ್ನು ಅಪ್ಪು (ಪುನೀತ್ ರಾಜ್‌ಕುಮಾರ್) ಅವರು ಅದ್ಭುತ ಪ್ರತಿಭೆಯಾಗಿದ್ದರು. ಇವರ ವಿಷಯದಲ್ಲಿ ನೆಪೋಟಿಸಂ ಎನ್ನುವ ಪದವೇ ಬರಬಾರದು. ಏಕೆಂದರೆ ಅವರಿಂದ ಸ್ಫೂರ್ತಿ ಪಡೆದು ಚಿತ್ರರಂಗಕ್ಕೆ ಬಂದವರು ಸಾಕಷ್ಟು ಜನ ಇದ್ದಾರೆ. ಇವರೆಲ್ಲರೂ ತಮ್ಮ ಸ್ವಂತ ಪರಿಶ್ರಮದಿಂದ ಜನರ ಹೃದಯ ಗೆದ್ದಿದ್ದಾರೆ" ಎಂದು ಅಭಿಪ್ರಾಯಪಟ್ಟರು.
ತಮ್ಮದೇ ಸ್ವಂತ ಕುಟುಂಬದ ಉದಾಹರಣೆ ನೀಡಿದ ಕಿಚ್ಚ, "ನನ್ನ ಸ್ವಂತ ಮನೆಯಲ್ಲಿ ಇವತ್ತು ಸಂಚಿತ್ ಸಿನಿಮಾ ರಂಗಕ್ಕೆ ಬಂದಿದ್ದಾನೆ. ಅವನನ್ನು ಬಿಟ್ಟು ನನ್ನ ಅಕ್ಕನ ಮಕ್ಕಳು, ನನ್ನ ಕಸೀನ್ಸ್ ಮಕ್ಕಳು ಅಂತ ಸಾಕಷ್ಟು ಜನ ಇದ್ದಾರೆ. ಆದರೆ ಅವರ್ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ನನ್ನ ಮಗಳಿಗೆ ಸಂಗೀತದಲ್ಲಿ ಆಸಕ್ತಿಯಿದೆ ಮತ್ತು ಚೆನ್ನಾಗಿ ಹಾಡ್ತಾಳೆ, ಹಾಗಾಗಿ ಆಕೆ ಹಿನ್ನೆಲೆ ಗಾಯಕಿಯಾಗಿ ಬಂದಿದ್ದಾಳೆ. ಸಂಚಿತ್‌ಗೆ ನಟನೆಯಲ್ಲಿ ತೀವ್ರ ಆಸಕ್ತಿಯಿದೆ ಮತ್ತು ಅದಕ್ಕೆ ಬೇಕಾದ ತರಬೇತಿ ಪಡೆದುಕೊಂಡಿದ್ದಾನೆ, ಹಾಗಾಗಿ ಬಂದಿದ್ದಾನೆ. ಈ ನೆಪೋಟಿಸಂ ಎನ್ನುವ ಪದ ಸುಮಾರು ವರ್ಷಗಳಿಂದ ನಮಗೆ ಸೂಟ್ ಆಗಲ್ಲ. ಇನ್ನು ಕೆಲವರಿಗೆ ಆ ಪದದ ನಿಜವಾದ ಅರ್ಥ ಕೂಡ ಗೊತ್ತಿಲ್ಲ. ನಮಗೆ ಗೊತ್ತಿರುವುದು ಕೇವಲ ಕಲೆ ಮತ್ತು ಸಿನಿಮಾ ಮಾತ್ರ" ಎಂದು ನಟ ಸುದೀಪ್ ನೆಪೋಟಿಸಂ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ವರದಿ: www.suddilive.com
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

