}

ಮಂಗಳೂರು: ಮೇ 26-27ರಂದು ವಿದ್ಯುತ್ ವ್ಯತ್ಯಯ | ನಗರದ ಹಲವೆಡೆ ಪವರ್ ಕಟ್

suddilive.com
By -
0

 


ಮಂಗಳೂರು, ಮೇ 25: ನಗರದ ವಿವಿಧ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣೆ, ವ್ಯವಸ್ಥೆ ಸುಧಾರಣೆ ಹಾಗೂ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಮೇ 26 ಮತ್ತು 27ರಂದು ಮಂಗಳೂರು ನಗರದ ಹಲವೆಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಮಣ್ಣಗುಡ್ಡ ಉಪಕೇಂದ್ರದಿಂದ ಹೊರಡುವ ಉರ್ವಮಾರ್ಕೆಟ್ ಫೀಡರ್ ಮತ್ತು ಮಠದಕಣಿ ಫೀಡರ್‌ಗಳಲ್ಲಿ ಮೇ 26ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣೆ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗಾಂಧಿನಗರ, ಅಭಿಯಾನ್ ಪ್ಯಾಲೇಸ್, ಲೇಡಿಹಿಲ್, ಗಾಂಧಿಪಾರ್ಕ್, ಉರ್ವಗಾರ್ಡ್, ಸೋಡ ಶೋರೂಂ, ಕೊರಗಜ್ಜ ದೈವಸ್ಥಾನ, ಸುಲ್ತಾನ್‌ಬತ್ತೇರಿ ರಸ್ತೆ, ಬಿಲ್ಲವ ಸಂಘ, ಗುಂಡೂರಾವ್ ಲೇನ್, ಮಿಷನ್ ಗೋರಿ ರಸ್ತೆ, ಬರ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.


ಬಿಜೈ ಉಪಕೇಂದ್ರದಿಂದ ಹೊರಡುವ ಬಿಜೈ, ಭಾರತೀನಗರ ಹಾಗೂ ವಿವೇಕನಗರ ಫೀಡರ್‌ಗಳಲ್ಲಿ ಮೇ 27ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣೆ ಕಾಮಗಾರಿ ನಡೆಯಲಿದ್ದು, ಬಿಜೈ ನ್ಯೂರೋಡ್, ಸಂಕೈಗುಡ್ಡ, ಎಂಸಿಎಫ್ ಕಾಲನಿ, ಆನೆಗುಂಡಿ, ಬಿಜೈ ಚರ್ಚ್, ಬಿಜೈ ಮ್ಯೂಸಿಯಂ, ಭಾರತೀನಗರ, ಚಂದ್ರಿಕಾ ಬಡಾವಣೆ ರಸ್ತೆ, ಕೊಡಿಯಾಲ್ ಬೈಲ್, ಕೊಡಿಯಾಲ್ ಗುತ್ತು, ವಿವೇಕನಗರ, ಶ್ರೀದೇವಿ ಕಾಲೇಜ್ ರಸ್ತೆ, ಕೆಎಸ್ಸಾರ್ಟಿಸಿ, ಸಿ.ಜಿ ಕಾಮತ್ ರಸ್ತೆ, ಜೈಲ್ ರಸ್ತೆ, ಎಂ.ಜಿ ರಸ್ತೆ, ಲಾಲ್‌ಬಾಗ್ ರಸ್ತೆ, ಬಳ್ಳಾಲ್‌ಬಾಗ್, ಮಾನಸ ಟವರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


ಕೊಣಾಜೆ ಉಪಕೇಂದ್ರದಿಂದ ಹೊರಡುವ ಮಂಜನಾಡಿ ಫೀಡರ್, ಕೋಟೆಕಾರ್ ಉಪಕೇಂದ್ರದ ತಲಪಾಡಿ, ಕೊಂಡಾಣ, ಕೋಟೆಕಾರ್ ಫೀಡರ್, ಪಜೀರ್ ಮತ್ತು ಬೋಳಿಯಾರ್ ಫೀಡರ್‌ಗಳು ಹಾಗೂ ತೊಕ್ಕೊಟ್ಟು ಉಪಕೇಂದ್ರದ ಕುತ್ತಾರ್ ಫೀಡರ್‌ಗಳಲ್ಲಿ ಮೇ 27ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವ್ಯವಸ್ಥೆ ಸುಧಾರಣೆ ಮತ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಇದರ ಪರಿಣಾಮವಾಗಿ ತಿಬ್ಲೆಪದವು, ಕುರಿಯಾ, ರೆಹಮತ್ ನಗರ, ಬೆಳರಿಂಗೆ, ಕಲ್ಲರಕೋಡಿ, ತೌಡುಗೋಳಿ, ಪಟ್ಟೋಲಿಕೆ, ಆಳ್ವರಬೆಟ್ಟು, ಮೊಂಟೆಪದವು, ಗ್ರೀನ್‌ಭಾಗ್, ನಾಟೆಕಲ್, ಮಿಂಪ್ರಿ, ಪನ್ನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ಕೆ.ಸಿ. ರೋಡ್, ಹೊಸನಗರ, ಕೆ.ಸಿ ನಗರ, ಅಲಂಕಾರಗುಡ್ಡೆ, ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮ ಚಾವಡಿ, ನ್ಯೂಪಡ್ಪು, ಟಿಸಿಒ, ಹರೇಕಳ, ಬೈತಾರ್, ಕುತ್ತಿಮುಗೇರು, ಪಾವೂರು, ಉಳಿಯ, ಮಲಾರ್, ಗಾಡಿಗದ್ದೆ, ಬಿಐಟಿ ಕಾಲೇಜ್, ಇನೋಳಿ, ಸಂಪಿಗೆದಡಿ, ಕೊಪ್ಪರಿಗೆ, ಪಜೀರ್, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿ ನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿ ಗುತ್ತು, ಗಂಡಿ, ವಿಜೇತನಗರ, ತಾರಿಪಡ್ಪು, ದಾರಂದಬಾಗಿಲು, ಹೊಸಗದ್ದೆ, ಟೋಲ್‌ಗೇಟ್, ಮೇಲಿನ ತಲಪಾಡಿ, ವಿವೇಕಾನಂದ ನಗರ, ಸಾಂತ್ಯ, ನೆತ್ತಿಲಪದವು, ಸಂಕೇಶ, ಅಡ್ಕ, ಕೋಟೆಕಾರ್, ಬೀರಿ, ಮಾಡೂರು, ಕೊಂಡಾಣ, ನಡಾರ್, ಮಡ್ಯಾರ್, ಕಾಯರ್‌ಮಜಲ್, ಸಂಕೊಳಿಗೆ, ಉಚ್ಚಿಲ, ನಯಪಟ್ನ, ಬೋವಿಶಾಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.


ಎಂಎಸ್‌ಇಝೆಡ್ ಉಪಕೇಂದ್ರದಿಂದ ಹೊರಡುವ ಕಟೀಲು ಟೆಂಪಲ್, ಪೆರ್ಮುದೆ ಮತ್ತು ಬಜಪೆ ಟೌನ್ ಫೀಡರ್‌ಗಳಲ್ಲಿ ಮೇ 27ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಬಜಪೆ ಸಿಟಿ, ಕಿನ್ನಿಪದವು, ಕಲ್ಲಜರಿ, ಬಿ.ಪಿ ಕಾಂಪೌಂಡ್, ಅಡ್ಕಬಾರೆ, ಪೆರ್ಮುದೆ, ಭಟ್ರಕೆರೆ, ಸ್ವಾಮಿಲಪದವು, ತೆಂಕಎಕ್ಕಾರು, ಮೆಂಗಲಪದವು, ಹುಣ್ಸೆಕಟ್ಟೆ, ಎಕ್ಕಾರು, ಕಟೀಲು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


ಇನ್ನೊಂದೆಡೆ, ಮೂಡುಬಿದಿರೆ ಉಪಕೇಂದ್ರದ ಬೆಳುವಾಯಿ ಮತ್ತು ಅಳಿಯೂರು ಫೀಡರ್‌ಗಳು ಹಾಗೂ ಶಿರ್ತಾಡಿ ಉಪಕೇಂದ್ರದ ಕೆವಿ ದಡ್ಡಲ್ ಪಲ್ಕೆ, ಮಾಂಟ್ರಾಡಿ, ಜೋಗೊಟ್ಟು, ಕೊಣಾಜೆ, ದರೆಗುಡ್ಡೆ, ಮಕ್ಕಿ, ಕಜೆ ಹಾಗೂ ಶಿರ್ತಾಡಿ ಫೀಡರ್‌ಗಳಲ್ಲಿ ಮೇ 27ರಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿರ್ತಾಡಿ, ಕೊಯಿಕುಡೆ, ಪಿದಮಲೆ, ಬೈಲಬರ್ಕೆ, ಬೋರುಗುಡ್ಡೆ, ಕರ್ನಲ್ ಗುಡ್ಡೆ, ಹೂಂಪೆಟ್ಟು, ಆನೆಗುಡ್ಡೆ, ಕುಕ್ಕುದಕಟ್ಟೆ, ಮರ್ಗರ್ ಕಳ, ಪಡುಕೊಣಾಜೆ, ಮೇಕಾರು ದ್ವಾರ, ಅರಸುಕಟ್ಟೆ, ಶುಭಮಂಗಳ, ವಿದ್ಯಾನಗರ, ಕಜೆ, ಕಾಶಿಪಟ್ನ, ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಝಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯದೆ, ಕೆಸರಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಅಳಿಯೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default