}

ಮಂಗಳೂರಿನ ಅಶ್ಮಿತ್‌ಗೆ ಸರಿಗಮಪ ಲಿಟಲ್‌ ಚಾಂಪ್ಸ್‌ ಕಿರೀಟ; ಅಚಿಂತ್ಯಗೆ ದ್ವಿತೀಯ ಸ್ಥಾನ

suddilive.com
By -
0

 


ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ ಲಿಟಲ್‌ ಚಾಂಪ್ಸ್‌’ನ ಈ ಸೀಸನ್‌ಗೆ ಅದ್ಧೂರಿ ಗ್ರ್ಯಾಂಡ್‌ ಫಿನಾಲೆಯೊಂದಿಗೆ ತೆರೆ ಬಿದ್ದಿದೆ. ಮಂಗಳೂರಿನ ಅಶ್ಮಿತ್‌ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ಟ್ರೋಫಿಯೊಂದಿಗೆ ₹20 ಲಕ್ಷ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಗ್ರ್ಯಾಂಡ್‌ ಫಿನಾಲೆಯಲ್ಲಿ ಅಶ್ಮಿತ್‌ ಅವರು ‘ಶಿವಶಂಕರಿ’ ಹಾಡನ್ನು ಹಾಡಿ ಪ್ರೇಕ್ಷಕರ ಮನಗೆದ್ದರು. ಅಂತಿಮ ಸುತ್ತಿನಲ್ಲಿ ಅಶ್ಮಿತ್‌, ಅಚಿಂತ್ಯ, ಮಹನ್ಯಾ, ಹರುಷ್‌, ಜಯಲಕ್ಷ್ಮೀ ಹಾಗೂ ಅವ್ಯುಕ್ತ್‌ ಚಾಂಪಿಯನ್‌ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದರು.


ನಾಗರಾಜ್‌ ಅವರ ತಂಡದಲ್ಲಿದ್ದ ಅಶ್ಮಿತ್‌ ಅಂತಿಮವಾಗಿ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ‘ಸರಿಗಮಪ ಲಿಟಲ್‌ ಚಾಂಪ್ಸ್‌’ ಕಿರೀಟವನ್ನು ಮುಡಿಗೇರಿಸಿಕೊಂಡರು. ಇದೇ ವೇಳೆ ಮಂಗಳೂರಿನ ಮತ್ತೊಬ್ಬ ಪ್ರತಿಭಾವಂತ ಸ್ಪರ್ಧಿ ಅಚಿಂತ್ಯ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಅವರಿಗೆ ₹15 ಲಕ್ಷ ನಗದು ಬಹುಮಾನ ನೀಡಲಾಯಿತು.


ಫಿನಾಲೆಯ ವೇದಿಕೆಯಲ್ಲಿ ನಡೆದ ಪ್ರದರ್ಶನಗಳು, ಸ್ಪರ್ಧಿಗಳ ಗಾಯನ ಹಾಗೂ ಭರ್ಜರಿ ಸಂಭ್ರಮದ ನಡುವೆ ಅಶ್ಮಿತ್‌ ಅವರ ಗೆಲುವು ಗಮನ ಸೆಳೆಯಿತು. ಮಂಗಳೂರಿನ ಇಬ್ಬರು ಸ್ಪರ್ಧಿಗಳು ಕ್ರಮವಾಗಿ ಮೊದಲ ಹಾಗೂ ದ್ವಿತೀಯ ಸ್ಥಾನ ಪಡೆಯುವ ಮೂಲಕ ಕರಾವಳಿಯ ಸಂಗೀತ ಪ್ರತಿಭೆಗೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ.

About the Author

suddilive Suddilive.com covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default