}

ಮಂಗಳೂರು: ನದಿಗೆ ಬಿದ್ದ ಫುಟ್‌ಬಾಲ್ ತೆಗೆಯಲು ಹೋಗಿ ಯುವಕ ಸಾವು

suddilive.com
By -
0

 


ಮಂಗಳೂರು: ಮಕ್ಕಳ ಆಟದ ವೇಳೆ ನದಿಗೆ ಬಿದ್ದ ಫುಟ್‌ಬಾಲ್‌ ಚೆಂಡನ್ನು ಹೆಕ್ಕಲು ನದಿಗಿಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಗರದ ಕಸಬಾ ಬೆಂಗ್ರೆ ಫೆರಿಪಾಯಿಂಟ್‌ ಬಳಿ ಭಾನುವಾರ (ಆ.23) ನಡೆದಿದೆ.


ಮೃತರನ್ನು ಮೊಹಮ್ಮದ್ ಸನಾವುಲ್ಲಾ (25) ಎಂದು ಗುರುತಿಸಲಾಗಿದೆ.


ಫೆರಿಪಾಯಿಂಟ್‌ ಬಳಿ ಮಕ್ಕಳು ಫುಟ್‌ಬಾಲ್ ಆಡುತ್ತಿದ್ದ ವೇಳೆ ಚೆಂಡು ಆಕಸ್ಮಿಕವಾಗಿ ಪಕ್ಕದಲ್ಲೇ ಹರಿಯುತ್ತಿದ್ದ ನದಿಗೆ ಬಿದ್ದಿತ್ತು. ಚೆಂಡನ್ನು ಹೊರತೆಗೆಯಲು ಸಾಧ್ಯವಾಗದೆ ಮಕ್ಕಳು ಪರದಾಡುತ್ತಿದ್ದುದನ್ನು ಗಮನಿಸಿದ ಸನಾವುಲ್ಲಾ, ಅವರಿಗೆ ನೆರವಾಗಲು ನದಿಗೆ ಇಳಿದಿದ್ದರು.


ಆದರೆ, ನದಿಯ ದಡದಲ್ಲಿದ್ದ ಕೆಸರಿನಲ್ಲಿ ಅವರ ಕಾಲು ಹೂತುಹೋಗಿದ್ದು, ಕೂಡಲೇ ಮೇಲಕ್ಕೆ ಬರಲು ಸಾಧ್ಯವಾಗದೆ ಆಳವಾದ ನೀರಿಗೆ ಮುಳುಗಿದ್ದಾರೆ.


ಘಟನೆಯನ್ನು ಕಂಡ ಮಕ್ಕಳು ಹಾಗೂ ಸ್ಥಳೀಯರು ತಕ್ಷಣ ನೀರಿಗೆ ಧುಮುಕಿ ಸನಾವುಲ್ಲಾ ಅವರನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.


ಘಟನೆ ಕುರಿತು ಸಂಬಂಧಪಟ್ಟ ಠಾಣೆಯ ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

About the Author

Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.

📢 SUDDI LIVE WhatsApp Community

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.

📲 Join WhatsApp Community

📢 SUDDI LIVE Facebook Page

ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.

👍 Follow SUDDI LIVE

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

Tags:

Post a Comment

0 Comments

Post a Comment (0)
3/related/default