ಕಾರ್ಕಳ: ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ಮತ್ತು ರಂಗಭೂಮಿಯ ಬೆಳವಣಿಗೆಗಾಗಿ ಸ್ಥಾಪನೆಯಾಗಿದ್ದ ‘ಯಕ್ಷರಂಗಾಯಣ’ ಸಂಸ್ಥೆಯ ಹೆಸರನ್ನು ಬದಲಾಯಿಸಲು ಹೊರಟಿರುವ ಸರ್ಕಾರದ ದಿಢೀರ್ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಈ ದುರುದ್ದೇಶಪೂರಿತ ನಿರ್ಧಾರವು ಕರಾವಳಿಯ ಸಾಂಸ್ಕೃತಿಕ ಪರಂಪರೆ ಹಾಗೂ ಕಲಾವಿದರ ಸ್ವಾಭಿಮಾನಕ್ಕೆ ಪ್ರಬಲ ಆಘಾತ ನೀಡಿದೆ ಎಂದು ಸಾಮಾಜಿಕ ಚಿಂತಕಿ ಶ್ರೀಮತಿ ರಮಿತಾ ಸೂರ್ಯವಂಶಿ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾರ್ಕಳದ ಶಾಸಕರು ಹಾಗೂ ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನಿಲ್ ಕುಮಾರ್ ಅವರ ದೂರದರ್ಶಿತ್ವದ ಕನಸಿನ ಕೂಸಾಗಿ ‘ಯಕ್ಷರಂಗಾಯಣ’ ಅಸ್ತಿತ್ವಕ್ಕೆ ಬಂದಿತ್ತು. ಕಾರ್ಕಳ ಸೇರಿದಂತೆ ಸುತ್ತಮುತ್ತಲಿನ ಭಾಗದ ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ಇಂದಿನ ಯುವ ಪೀಳಿಗೆಗೆ ಯಕ್ಷಗಾನ ಹಾಗೂ ರಂಗಾಯಣ ನಾಟಕಗಳ ಭವ್ಯ ಮಹತ್ವವನ್ನು ಪರಿಚಯಿಸುವ ಮಹತ್ವಾಕಾಂಕ್ಷಿ ಉದ್ದೇಶದಿಂದ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿತ್ತು. ಇದಕ್ಕೆ ಪೂರಕವಾದ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಅಭಿವೃದ್ಧಿ ಕೆಲಸಗಳು ಇಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದವು ಎಂದು ನೆನಪಿಸಿಕೊಂಡಿದ್ದಾರೆ.
ಕರಾವಳಿ ಸಾಂಸ್ಕೃತಿಕ ಭೂಮಿಯಲ್ಲಿ ಯಕ್ಷಗಾನಕ್ಕೆ ಅತ್ಯುನ್ನತ ಸ್ಥಾನವಿದೆ. ಕಲೆಯ ಮೇಲಿನ ಗೌರವಾರ್ಥವಾಗಿ ಈ ಸಂಸ್ಥೆಗೆ ‘ಯಕ್ಷರಂಗಾಯಣ’ ಎಂದು ನಾಮಕರಣ ಮಾಡಿದ್ದು ಕಲಾಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿಸಿತ್ತು. ಆದರೆ, ಪ್ರಸ್ತುತ ರಾಜಕೀಯ ಪ್ರೇರಿತವಾಗಿ ಸಂಸ್ಥೆಯ ಹೆಸರು ಬದಲಿಸಲು ಮುಂದಾಗಿರುವುದು ಕರಾವಳಿಯ ಕಲಾ ಜಗತ್ತಿಗೆ ಹಾಗೂ ಹಗಲಿರುಳು ಕಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಆತ್ಮಗೌರವಕ್ಕೆ ಎಸಗಿದ ದ್ರೋಹವಾಗಿದೆ. ಕಲಾಭಿಮಾನಿಯಾಗಿ ಸರ್ಕಾರದ ಈ ಜನವಿರೋಧಿ ಮತ್ತು ಸಂಸ್ಕೃತಿ ವಿರೋಧಿ ನಿರ್ಧಾರವನ್ನು ತಾನು ತೀವ್ರವಾಗಿ ಖಂಡಿಸುವುದಾಗಿ ರಮಿತಾ ಸೂರ್ಯವಂಶಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

