ಕನಕಪುರ: ನಟ ದರ್ಶನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಬೇಕು ಎಂದು ದರ್ಶನ್ ಅಭಿಮಾನಿಗಳು ನೇರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ಘಟನೆ ಭಾನುವಾರ ಕನಕಪುರದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಗಮನ ಸೆಳೆಯಿತು. ಕಾರ್ಯಕ್ರಮದ ವೇಳೆ ಡಿ.ಕೆ. ಶಿವಕುಮಾರ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲೇ ಅಭಿಮಾನಿಗಳು ಜೋರಾಗಿ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು.
ಸಮಾವೇಶದಲ್ಲಿ ಸಾವಿರಾರು ಜನರು ಭಾಗವಹಿಸಿದ್ದ ವೇಳೆ, ವೇದಿಕೆಯಲ್ಲಿ ಮಾತನಾಡುತ್ತಿದ್ದ ಡಿ.ಕೆ. ಶಿವಕುಮಾರ್ ಅವರ ಭಾಷಣದ ಮಧ್ಯೆಯೇ ಕೆಲವು ಅಭಿಮಾನಿಗಳು "ಡಿಬಾಸ್ ಬಿಡುಗಡೆ ಆಗಬೇಕು" ಎಂದು ಘೋಷಣೆ ಕೂಗಲಾರಂಭಿಸಿದರು. ಆರಂಭದಲ್ಲಿ ಅಭಿಮಾನಿಗಳ ಕೂಗನ್ನು ನಿರ್ಲಕ್ಷಿಸಲು ಪ್ರಯತ್ನಿಸಿದ ಡಿಕೆಶಿ ತಮ್ಮ ಭಾಷಣವನ್ನು ಮುಂದುವರಿಸಿದರು. ಆದರೆ ಅಭಿಮಾನಿಗಳ ಘೋಷಣೆ ಹೆಚ್ಚಾಗುತ್ತಾ ಹೋದ ಕಾರಣ ಪರಿಸ್ಥಿತಿ ಕೆಲಕಾಲ ಗದ್ದಲಮಯವಾಗಿತ್ತು. ವರದಿ ಸುದ್ದಿ ಲೈವ್ ಡಾಟ್ ಕಾಮ್
ಅಭಿಮಾನಿಗಳು ನಿರಂತರವಾಗಿ "ಡಿಬಾಸ್, ಡಿಬಾಸ್" ಎಂದು ಜೈಕಾರ ಹಾಕುತ್ತಲೇ ಇದ್ದರು. ಇದರಿಂದ ಅಸಮಾಧಾನಗೊಂಡ ಡಿ.ಕೆ. ಶಿವಕುಮಾರ್, "ಯಾವ ಡಿಬಾಸೂ ಇಲ್ಲ, ಗೀಬಾಸೂ ಇಲ್ಲ, ಸುಮ್ಮನಿರ್ರೋ" ಎಂದು ವೇದಿಕೆಯಿಂದಲೇ ಪ್ರತಿಕ್ರಿಯಿಸಿದರು. ಆದರೂ ಅಭಿಮಾನಿಗಳು ತಮ್ಮ ಘೋಷಣೆಯನ್ನು ನಿಲ್ಲಿಸದೇ ಮುಂದುವರಿಸಿದ್ದರಿಂದ ಕಾರ್ಯಕ್ರಮದ ವಾತಾವರಣ ಕೆಲಕಾಲ ಉದ್ವಿಗ್ನಗೊಂಡಿತು.
ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಡಿಕೆಶಿ ಮತ್ತಷ್ಟು ಕಠಿಣ ಧಾಟಿಯಲ್ಲಿ ಎಚ್ಚರಿಕೆ ನೀಡಿದರು. "ಜಾಸ್ತಿ ಗಲಾಟೆ ಮಾಡಿದ್ರೆ ಪೊಲೀಸರ ಲಾಠಿಯೇಟು ಬೀಳುತ್ತೆ" ಎಂದು ವಾರ್ನಿಂಗ್ ನೀಡಿದ ಅವರು, ಅಭಿಮಾನಿಗಳಿಗೆ ಶಾಂತವಾಗಿರುವಂತೆ ಸೂಚಿಸಿದರು. ಬಳಿಕ ತಮ್ಮ ಭಾಷಣವನ್ನು ಮುಗಿಸಿ ವೇದಿಕೆಯಿಂದ ಕೆಳಗಿಳಿದರು. ವರದಿ ಸುದ್ದಿ ಲೈವ್ ಡಾಟ್ ಕಾಮ್
ಈ ಘಟನೆ ಸಮಾವೇಶದಲ್ಲಿ ಹಾಜರಿದ್ದವರ ಗಮನ ಸೆಳೆದಿದ್ದು, ದರ್ಶನ್ ಅಭಿಮಾನಿಗಳ ಘೋಷಣೆ ಹಾಗೂ ಅದಕ್ಕೆ ಡಿ.ಕೆ. ಶಿವಕುಮಾರ್ ನೀಡಿದ ಪ್ರತಿಕ್ರಿಯೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಘಟನೆಯು ರಾಜಕೀಯ ಸಮಾವೇಶದಲ್ಲಿ ಚಿತ್ರನಟನ ಪರ ಅಭಿಮಾನಿಗಳು ನಡೆಸಿದ ಘೋಷಣೆಯ ಕಾರಣದಿಂದ ವಿಶೇಷ ಚರ್ಚೆಗೆ ಗ್ರಾಸವಾಗಿದೆ.
ವರದಿ: www.suddilive.com
About the Author
Prajwal is the Founder and Editor of Suddilive.com. He covers Karnataka news, politics, education, employment, sports, technology, and current affairs. He is committed to providing accurate, timely, and reliable information through responsible digital journalism.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

